|
ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ
ಬೆಂಗಳೂರು: ಬೆಂಗಳೂರಿನಲ್ಲಿ ಪ್ರಿಂಟ್ ಟೆಸ್ಟಿಂಗ್ ಮತ್ತು
ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಜೆರಾಕ್ಸ್ ಇಂಡಿಯಾ ಲಿ.
ಸ್ಟೇಟ್ ಪ್ರಿಂಟರ್‍ಸ್ ಅಸೋಸಿಯೇಶನ್ (ಕೆಎಸ್‌ಪಿಎ) ಮತ್ತು ಕರ್ನಾಟಕ
ರಾಜ್ಯ ಸರ್ಕಾರದೊಡನೆ ಒಪ್ಪಂದ ಮಾಡಿಕೊಂಡಿದೆ.
ಬುಧವಾರ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕಟ್ಟಾ
ಸುಬ್ರಮಣ್ಯ ನಾಯ್ಡು, ವಾಣಿಜ್ಯ ಮತ್ತು ಕೈಗಾರಿಕೆ ಕಾರ್ಯದರ್ಶಿ
ಕೆ.ಎಂ. ಶಿವಕುಮಾರ್ ಮತ್ತು ಜೆರಾಕ್ಸ್ ಇಂಡಿಯಾದ ವ್ಯವಸ್ಥಾಪಕ
ನಿರ್ದೇಶಕ ಆಂಡ್ರೀವ್ ಹಾರ್ನ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು.
ತರಬೇತಿ ಕೇಂದ್ರದ ವಿಶೇಷತೆಗಳು:
ಜೆರಾಕ್ಸ್ ಕೆಎಸ್‌ಪಿಎ ಪ್ರಿಂಟ್ ಟೆಸ್ಟಿಂಗ್ ಮತ್ತು ತರಬೇತಿ ಕೇಂದ್ರ
`ಪ್ರಿ-ಪ್ರೆಸ್', `ಪ್ರೆಸ್', `ಪೋಸ್ಟ್ ಪ್ರೆಸ್' ಮತ್ತು ಡಿಜಿಟಲ್ ಪ್ರಿಂಟಿಂಗ್
ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡಲಿದೆ.
೧೮ ವಿವಿಧ ರೀತಿಯ ಕೋರ್ಸ್‌ಗಳನ್ನು ತರಬೇತಿ ಕೇಂದ್ರ ಹೊಂದಿದೆ.
ಡಿಜಿಟಲ್ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರಿಂದ ಶಿಕ್ಷಣ ನೀಡಲಾಗುತ್ತದೆ.
`ಇದರಿಂದ ವರ್ಷಕ್ಕೆ ಸುಮಾರು ೫ ಸಾವಿರ ವಿದ್ಯಾರ್ಥಿಗಳು ಇದರ
ಉಪಯೋಗ ಪಡೆಯಲಿದ್ದಾರೆ. ಕೈಗಾರಿಕೆ ಬೆಳೆದಂತೆಲ್ಲ ತಾಂತ್ರಿಕ
ಶಿಕ್ಷಣ ಪಡೆದವರ ಅಗತ್ಯ ಹೆಚ್ಚುತ್ತದೆ. ಕೆಎಸ್‌ಪಿಎದೊಂದಿಗಿನ ಈ
ಹೊಂದಾಣಿಕೆಯು ದೀರ್ಘಕಾಲದ್ದಾಗಿದ್ದು ಕೈಗಾರಿಕೋದ್ಯಮದ
ಬೆಳವಣಿಗೆಗೆ ಪೂರಕವಾದ ತಾಂತ್ರಿಕ ಶಿಕ್ಷಣ ನೀಡುವುದು ನಮ್ಮ
ಉದ್ದೇಶವಾಗಿದೆ' ಎಂದು ಆಂಡ್ರೀವ್ ಹಾರ್ನ್ ತಿಳಿಸಿದರು.
ಇನ್ನಷ್ಟು
ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|