|
ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಬೆಂಗಳೂರು: ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳನ್ನು
ಎಜುಸ್ಯಾಟ್ ಉಪಗ್ರಹದ ಮೂಲಕ ಸಂಪರ್ಕಿಸುವ `ಮೆಗಾಮೆಟ್'
ಯೋಜನೆಯ ಮೊದಲ ಹಂತಕ್ಕೆ ಬುಧವಾರ ಚಾಲನೆ ನೀಡಲಾಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)
ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಟಿ.ಎನ್.
ಚತುರ್ವೇದಿ ಅವರು ಈ ಯೋಜನೆಯನ್ನು ಉದ್ಘಾಟಿಸಿದರು.
ಇದರಿಂದ ಇ-ಕಲಿಕಾ ಚೌಕಟ್ಟಿಗೆ ಒಳಪಟ್ಟ ಮೊದಲ ವಿಶ್ವವಿದ್ಯಾಲಯ ಎಂಬ
ಕೀರ್ತಿಗೆ ವಿಟಿಯು ಪಾತ್ರವಾಗಿದೆ. ಕುಲಪತಿ ಡಾ. ಕೆ. ಬಲವೀರ ರೆಡ್ಡಿ
ಅವರು ಮಾತನಾಡಿ `ಮೆಗಾನೆಟ್' ಯೋಜನೆಯನ್ನು ಮುಂದಿನ ೧೨
ತಿಂಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಅನುಷ್ಠಾನ
ಮಾಡಲಾಗುವುದು. ಪ್ರಥಮ ಹಂತದಲ್ಲಿ ಕೇಂದ್ರಿಕೃತ ಡಾಟಾ
ಕೇಂದ್ರ ಮೂಲ ಸೌಕರ್ಯವನ್ನು ನಿರ್ಮಿಸಲಾಗುವುದು.
ದ್ವಿತೀಯ ಹಂತದಲ್ಲಿ ವಿವಿಯ ಎಲ್ಲ ಕೋರ್ಸ್‌ಗಳನ್ನು ಆನ್‌ಲೈನ್
ಪರೀಕ್ಷೆ ನಡೆಸಲು ಅತ್ಯಾಧುನಿಕ ಮೂಲ ಸೌಕರ್ಯ ನಿರ್ಮಾಣ.
ಸುಗಮ ಆಡಳಿತಕ್ಕಾಗಿ ವಿಡಿಯೋ ಕಾನ್ಫರೆನ್ಸ್ ಬಳಕೆ. ಅಂತಿಮ
ಹಂತವಾಗಿ ಮೌಲ್ಯಾಧಾರಿತ ಸೇವೆಗಳಿಗೆ ಒತ್ತು ಕೊಡಲಾಗುವುದು.
ವಿದ್ಯಾರ್ಥಿಗಳು ಸ್ವಯಂ ಚಾಲಿಕ ವ್ಯವಸ್ಥೆಯ ಮೂಲಕ ಫಲಿತಾಂಶ,
ಕೌಶಲ್ಯ ಪರೀಕ್ಷೆ,ಉದ್ಯೋಗ ಅವಕಾಶಗಳ ಸೇವೆಯನ್ನು
ಕಲ್ಪಿಸಲಾಗುವುದು. ವೆಬ್ ಆಧಾರಿತ ಮತ್ತು ಉಪಗ್ರಹ ಆಧಾರಿತ
ಶಿಕ್ಷಣ ಹಾಗೂ ಆನ್ ಲೈನ್ ಪರೀಕ್ಷೆ ನಡೆಸಲು ಅಗತ್ಯವಿರುವ ಸಾಫ್ಟ್
ಮತ್ತಿತರ ಅವಶ್ಯಕ ಸಿದ್ಧತೆ ನಡೆಸಲು ಈಗಾಗಲೇ ವಿವಿಧ
ಉಪಸಮಿತಿಗಳನ್ನು ವಿಟಿಯು ರಚಿಸಿದೆ ಎಂದು ಬಲವೀರ ರೆಡ್ಡಿ ಹೇಳಿದರು.
ಇಂಜಿನಿಯರ್ ಕಾಲೇಜುಗಳಲ್ಲಿ ಖಾಸಗಿ ಕಂಪೆನಿಗಳು ಉದ್ಯೋಗಕ್ಕಾಗಿ
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆಸುವ ಪ್ರತ್ಯೇಕ
ಪರೀಕ್ಷೆಯ ಬದಲಾಗಿ ವಿಟಿಯು ತನ್ನ ವ್ಯಾಪ್ತಿಯ ಎಲ್ಲ ಕಾಲೇಜಿನ
ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.
ಪ್ಲೇಸ್‌ಮೆಂಟ್ ಪರೀಕ್ಷೆ ನಡೆಸಲು ಸುಲಭವಾಗಲೆಂದು ಪ್ರತಿಷ್ಠಿತ
ಕಂಪೆನಿಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು
ರಚಿಸಲಾಗಿದೆ.
ಈ ಯೋಜನೆಗೆ ಬೇಕಾದ ವೆಚ್ಚವನ್ನು ಆಯಾ ಕಾಲೇಜು ಹಾಗೂ
ಇಸ್ರೋ, ಬಿಎಸ್‌ಎನ್‌ಎಲ್, ಐಬಿಎಂ, ಎಕ್ಸೆಲ್ ಸಾಫ್ಟ್ ಮತ್ತಿತರ
ಸಂಸ್ಥೆಗಳು ಭರಿಸಲಿದೆ ಎಂದು ಬಲವೀರ ರೆಡ್ಡಿ ಹೇಳಿದರು.
ಇನ್ನಷ್ಟು
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|