Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 30 November 2006 02:43 PM

ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ


ಮೈಸೂರು: ಜೆಡಿಸ್ ನಾಯಕರೂ, ಅರಣ್ಯ ಸಚಿವರೂ ಆದ ಚೆನ್ನಿಗಪ್ಪ ಮತ್ತು ಅವರ ಚಾಲಕ ಇಬ್ಬರೂ ಸೇರಿ ಕರ್ತವ್ಯ ನಿರತ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾವನ್ನು ಕಿತ್ತು ಕೊಂಡಿರುವ ಘಟನೆ ನಡೆದಿದೆ.

 

ಹಿನ್ನೆಲೆ: ಚಾಮುಂಡಿ ಬೆಟ್ಟದ ಹತ್ತಿರದ ಹಡಜನ ಕ್ರಾಸ್ ಬಳಿ ೧೨ ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಬರುತ್ತಿದ್ದ ಸಚಿವ ಚೆನ್ನಿಗಪ್ಪರನ್ನು ಚುನಾವಣಾ ವೀಕ್ಷಕರು ಈ ಕಾರುಗಳಿಗೆ ಪ್ರಚಾರದ ಅನುಮತಿ ಇಲ್ಲದ ಕಾರಣ ತಡೆದು ನಿಲ್ಲಿಸಿದರು. ಚುನಾವಣಾ ವೀಕ್ಷಕರಿಗೆ ಚೆನ್ನಿಗಪ್ಪ ಕೈ ಮುಗಿಯುತ್ತ `ನಿಯಮ ಉಲ್ಲಂಘಿಸಿದ್ದರೆ ದಯವಿಟ್ಟು ಕ್ಷಮಿಸಿ' ಎಂದರು.

 

ಸ್ಥಳದಲ್ಲಿದ್ದ `ಮೈಸೂರು ಮಿತ್ರ' ಪತ್ರಿಕೆಯ ವರದಿಗಾರ ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದಂತೆಯೇ ಚೆನ್ನಿಗಪ್ಪ ಆಕ್ರೋಶದಿಂದ `ಹಿಡ್ಕೊಳ್ರಿ..ಆ..ಮಗನ್ನ' ಎಂದು ತಮ್ಮ ಆಪ್ತ ಸಿಬ್ಬಂದಿಗಳಿಗೆ ಆಜ್ಞಾಪಿಸಿದರು. ಚೆನ್ನಿಗಪ್ಪ ಅವರ ಸಿಬ್ಬಂದಿಗಳು ವರದಿಗಾರನ್ನು ಎಳೆದುಕೊಂಡು ಹೋಗುವಾಗ ವರದಿಗಾರನಿಗೆ ಅನೇಕ ತರಚು ಗಾಯಗಳಾಗಿವೆ. ತನ್ನ ಕ್ಯಾಮೆರಾ ಮರಳಿ ನೀಡುವಂತೆ ವರದಿಗಾರ ಕೇಳಿಕೊಂಡರೂ ಮರಳಿಸಲಿಲ್ಲ.


ದೇವೇಗೌಡ ಕ್ಷಮೆಯಾಚನೆ: ಜೆಡಿಸ್ ವಕ್ತಾರ ವೈ.ಎಸ್.ವಿ. ದತ್ತಾ ಪತ್ರಿಕಾಗೋಷ್ಠಿ ಕರೆದು ಚೆನ್ನಿಗಪ್ಪ ಅವರ ನಡುವಳಿಕೆಯನ್ನು ಸಮರ್ಥಿಸಲು ಪ್ರಯತ್ನಿಸಿದಾಗ ದೊಡ್ಡ ಕೋಲಾಹಲವೇ ನಡೆಯಿತು. ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವಂತೆ ಪತ್ರಕರ್ತರು ಒತ್ತಾಯಿಸಿದರು. ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಪತ್ರಕರ್ತರನ್ನು ಕ್ಷಮೆಯಾಚಿಸಿದ್ದಾರೆ. ಈ ನಡುವೆ ಚೆನ್ನಿಗಪ್ಪ `ಮೈಸೂರು ಮಿತ್ರ' ಪತ್ರಿಕೆಯ ಸಂಪಾದಕರನ್ನು ಭೇಟಿಯಾಗಿ ಸಂಧಾನಕ್ಕೆ ಯತ್ನಿಸಿದ್ದಾರೆ.

 

ಇನ್ನಷ್ಟು

ಕನ್ನಡಿಗರ ಮನದಲ್ಲಿ ಇನ್ನೂ ನೆಲೆಸಿರುವ ಸರ್.ಎಂ. ವಿ

ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್ ಘೋಷಣೆ

ಬುದ್ಧನೆಡೆಗೆ.. ಮರಳಿ ಮನೆಗೆ: ಬೃಹತ್ ಸಮಾವೇಶ

ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರಿ ಸಂಸ್ಥೆ

ಎಸ್‌ಜಿಪಿಸಿಯ ಮುಖ್ಯಸ್ಥರಾಗಿ ಮಕ್ಕಾರ್ ಪುನರಾಯ್ಕೆ

ದೇಶದ ಪ್ರಥಮ ಚಿಟ್ಟೆ ಉದ್ಯಾನದ ಉದ್ಘಾಟನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com