|
ತೈಲ ಬೆಲೆ ಇಳಿಕೆ: ಇಂದು ಲೋಕಸಭೆಯಲ್ಲಿ ಪ್ರಕಟಣೆ
ನವದೆಹಲಿ: ಮಂಗಳವಾರ ರಾತ್ರಿ ತೈಲ ದರ ಇಳಿಕೆಯ ಬಗ್ಗೆ
ಪ್ರಧಾನಿ ಕರೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಇಂದು
ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಲೋಕಸಭೆಯಲ್ಲಿ
ಪ್ರಕಟಿಸಲಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೈಲ ಇಳಿಕೆಯ ಸಲಹೆ ನೀಡಿದ
ಹಿನ್ನೆಲೆಯಲ್ಲಿ ಪ್ರಧಾನಿ ಮನಮೋನಹನ ಸಿಂಗ್ ಸಭೆ ಕರೆದಿದ್ದರು.
ಮಂಗಳವಾರ ಲೋಕಸಭೆಯಲ್ಲಿ ಸೋನಿಯಾ ಗಾಂಧಿ,
ಅಂತರರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಬೆಲೆ
ಇಳಿಕೆಯಾದ್ದರಿಂದ ಭಾರತದಲ್ಲೂ ಬೆಲೆ ಇಳಿಕೆ ಮಾಡಬೇಕೆಂದು
ಹೇಳಿದ್ದರು. `ಸರ್ಕಾರವು ತೈಲ ಬೆಲೆ ಇಳಿಕೆಗೆ ಅನವಶ್ಯಕ ವಿಳಂಬ
ಮಾಡುತ್ತಿದೆ' ಎಂದು ಆರೋಪಿಸಿ ಪ್ರತಿ ಪಕ್ಷಗಳು ಸಭಾತ್ಯಾಗವನ್ನು
ನಡೆಸಿದ್ದರು.
ಪೆಟ್ರೋಲಿನ ಬೆಲೆಯಲ್ಲಿ ೨ ರೂ. ಮತ್ತು ಡೀಸೆಲ್‌ನ ಬೆಲೆಯಲ್ಲಿ ೧
ರೂ. ಇಳಿಕೆಯಾಗುವ ಸಾಧ್ಯತೆ ಇದೆ.
ತೈಲ ಕಂಪೆನಿಗಳು ೧ ಲೀ. ಪೆಟ್ರೋಲ್‌ಗೆ ೪ ರೂ. ಲಾಭ ಪಡೆದರೆ
ಡೀಸೆಲ್‌ನಲ್ಲಿ ಲೀಟರ್‌ಗೆ ೪೫-೭೫ ಪೈಸೆ ನಷ್ಟ ಮಾಡಿಕೊಳ್ಳುತ್ತಿವೆ.
ತೈಲ ಬೆಲೆ ಪರಿಷ್ಕರಣೆಯ ಬಗ್ಗೆ ಮಾತನಾಡುತ್ತ ದೇವೋರಾ
`ಲೀಟರ್‌ಗೆ ೧ ರೂ. ಇಳಿಕೆಯಿಂದ ಪೆಟ್ರೋಲ್‌ನಿಂದ ೭.೨೫ ಬಿಲಿಯನ್ ರೂ.
ಡಿಸೈಲ್‌ನಿಂದ ೩೨.೫೦ ಬಿಲಿಯನ್ ರೂ. ಆದಾಯ ಕುಸಿಯಲಿದೆ' ಎಂದು
ವಿವರಿಸಿರು.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|