|
ಭಾರತ-ಈಜಿಪ್ಟ್ ಐಟಿ ಕ್ಷೇತ್ರದಲ್ಲಿ ಒಪ್ಪಂದ
ಚೆನ್ನೈ: ಮಂಗಳವಾರ ಭಾರತದ ಮಾಹಿತಿ ಮತ್ತು
ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಮತ್ತು ಈಜಿಪ್ಟ್‌ನ ತರೆಲ್
ಕಮಲ್ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ
ಸಹಕಾರ ನೀಡಲು ಒಪ್ಪಂದಕ್ಕೆ ಸಹಿ ಮಾಡಿದರು.
ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಮಾರನ್ `ಈ ಒಡಂಬಡಿಕೆ ಭಾರತ ಮತ್ತು ಈಜಿಪ್ಟ್‌ನ ಪ್ರಾಚೀನ
ಬಾಂಧವ್ಯಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ' ಎಂದು
ಬಣ್ಣಿಸಿದರು.
`ನಾಗರೀಕತೆಯ ತೊಟ್ಟಿಲಾಗಿರುವ ಭಾರತ ಈಜಿಪ್ಟ್‌ಗಳು
ಹಂಚಿಕೊಳ್ಳಲು ಅನೇಕ ಸಮಾನ ವಿಷಯಗಳನ್ನು ಹೊಂದಿವೆ. ಅಲಿಪ್ತ
ಒಕ್ಕೂಟ ರಾಷ್ಟ್ರಗಳ ಸ್ಥಾಪಕರಾದ ಇವು ೫೦ ವರ್ಷಗಳಿಗಿಂತ ಹೆಚ್ಚು
ವರ್ಷದ ದೀರ್ಘ ರಾಜಕೀಯ ಸಂಬಂಧವನ್ನು ಹೊಂದಿವೆ ಎಂದು
ಹೇಳಿದರು.
`ಈಜಿಪ್ಟ್‌ನಲ್ಲಿ ಐಟಿ ಉದ್ಯಮದಲ್ಲಿ ಬಂಡವಾಳ ಹೂಡಿಕೆಯ
ಸಾಧ್ಯತೆಯನ್ನು ಪರಿಶಿಲಿಸುವ ಸಲುವಾಗಿ ನೆಸ್ಕಾಂ (NASSCOM)
ನಿಯೋಗವು ಮುಂದಿನ ತಿಂಗಳು ಈಜಿಪ್ಟ್‌ಗೆ ಭೇಟಿ ನೀಡಲಿದೆ' ಎಂದು
ಮಾರನ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಮಲ್ `ಈಜಿಪ್ಟ್‌ನಲ್ಲಿ ಐಟಿ ಕ್ಷೇತ್ರವು ಇನ್ನೂ
ಎಳಸು ಸ್ಥಿತಿಯಲ್ಲಿಯೇ ಇದೆ. ಆದ್ದರಿಂದ ಭಾರತೀಯ ಐಟಿ
ಉದ್ದಿಮೆಗಳ ಹೂಡಿಕೆ ಬಹಳ ಬೆಲೆ ಬಾಳುವಂಥಹದ್ದಾಗಿದೆ. ಇದಲ್ಲದೆ
ಈಜಿಪ್ಟ್ ಭಾರತದೊಂದಿಗೆ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಶೈಕ್ಷಣಿಕ
ಸಾಮಗ್ರಿಗಳ ವಿನಿಮಯ ಮಾಡಿಕೊಳ್ಳಲೂ ಬಯಸುತ್ತದೆ ಎಂದು
ಹೇಳಿದರು.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|