Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 29 November 2006 04:53 PM

ಭಾರಿ ಮೊತ್ತದ ಪ್ರಶಸ್ತಿ ನೀಡಿಕೆ ನಿರ್ಧಾರ:ಬೆಂಮಸಾಸಂ

 

ಬೆಂಗಳೂರು: ಸುವರ್ಣ ಕರ್ನಾಟಕ ಆಚರಣೆಯ ನೆನಪಿಗಾಗಿ ಪ್ರತಿ ವರ್ಷ ಐದು ಲಕ್ಷಕ್ಕೂ ಅಧಿಕ ಮೊತ್ತದ ಪ್ರಶಸ್ತಿಯನ್ನು ನೀಡುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೇಳಿಕೆ ನೀಡಿದೆ.
 

`ನೃಪತುಂಗ ಪ್ರಶಸ್ತಿ' ಎಂಬ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯ ಮೊತ್ತ `ಜ್ಞಾನಪೀಠ ಪ್ರಶಸ್ತಿ'ಗಿಂತ ಸಾವಿರ ರೂಪಾಯಿ ಅಧಿಕ ಮೊತ್ತ ಹೊಂದಿರುತ್ತದೆ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಪೇಂದ್ರ ತ್ರಿಪಾಠಿ ಹೇಳಿದ್ದಾರೆ.
 

ನೃಪತುಂಗ ಪ್ರಶಸ್ತಿಗೆ ಅರ್ಹರನ್ನು ಆರಿಸುವ ಅಧಿಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಲಾಗಿದೆ. ಮುಂದಿನ ಆಗಷ್ಟ್‌ನಲ್ಲಿ ಬಿಎಂಟಿಸಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ದಿನದಂದು ಪ್ರಶಸ್ತಿ ಪ್ರದಾನ ಮಾಡುವ ನಿರೀಕ್ಷೆಯಿದೆ. ಸಮಾರಂಭಕ್ಕೆ ರಾಷ್ಟ್ರಪತಿಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ನೊಬೆಲ್ ಪ್ರಶಸ್ತಿ ವಿಜೇತರನ್ನು ಆಹ್ವಾನಿಸುವ ಸಾಧ್ಯತೆಯಿದೆ ಎಂದು ಉಪೇಂದ್ರ ತ್ರಿಪಾಠಿ ಹೇಳಿದ್ದಾರೆ.
 

ಕಳೆದ ವರ್ಷ ಬಿಎಂಟಿಸಿ ಸುಮಾರು ೧೫೦ ಕೋಟಿ ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ೧.೫ ಕೋಟಿ ರೂ. ಗಳನ್ನು ಕನ್ನಡ ಸಾಹಿತ್ಯ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಇದರಿಂದ ನೃಪತುಂಗ ಪ್ರಶಸ್ತಿ ಹಾಗೂ ೧೦ ಮಂದಿ ಯುವ ಸಾಹಿತಿಗಳಿಗೆ ತಲಾ ೧೦ ಸಾವಿರ ರೂ. ಮೌಲ್ಯದ ಪ್ರಶಸ್ತಿ ನೀಡುವುದಾಗಿ ತ್ರಿಪಾಠಿ ಹೇಳಿದ್ದಾರೆ.

 

ಇನ್ನಷ್ಟು

ಕನ್ನಡಿಗರ ಮನದಲ್ಲಿ ಇನ್ನೂ ನೆಲೆಸಿರುವ ಸರ್.ಎಂ. ವಿ

ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್ ಘೋಷಣೆ

ಬುದ್ಧನೆಡೆಗೆ.. ಮರಳಿ ಮನೆಗೆ: ಬೃಹತ್ ಸಮಾವೇಶ

ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರಿ ಸಂಸ್ಥೆ

ಎಸ್‌ಜಿಪಿಸಿಯ ಮುಖ್ಯಸ್ಥರಾಗಿ ಮಕ್ಕಾರ್ ಪುನರಾಯ್ಕೆ

ದೇಶದ ಪ್ರಥಮ ಚಿಟ್ಟೆ ಉದ್ಯಾನದ ಉದ್ಘಾಟನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com