Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 27 November 2006 06:15 PM

ಬುದ್ಧನೆಡೆಗೆ.. ಮರಳಿ ಮನೆಗೆ: ಮೈಸೂರಿನಲ್ಲಿ ಬೃಹತ್ ಸಮಾವೇಶ

 

ಮೈಸೂರು: ಸುಮಾರು ೧೫ ಸಾವಿರ ದಲಿತ ಯುವಜನರು ಪಾಲ್ಗೊಂಡಿದ್ದ ರಾಜ್ಯಮಟ್ಟದ `ಬುದ್ಧನೆಡೆಗೆ..ಮರಳಿ ಮನೆಗೆ' ಸಮಾವೇಶವು ನ.೨೬ ಮೈಸೂರಿನಲ್ಲಿ ಜರುಗಿತು.
 

ಮೈಸೂರು ವಿಶ್ವವಿದ್ಯಾನಿಲಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೊಧನಾ ಹಾಗೂ ವಿಸ್ತರಣಾ ಕೇಂದ್ರ ಬೌದ್ಧ ಧಮ್ಮ ದೀಕ್ಷಾ ಸಮಿತಿಯವರು ಸಂಯುಕ್ತವಾಗಿ ಈ ಸಮಾವೇಶವನ್ನು ಆಯೋಜಿಸಿದ್ದರು.
 

ಸಮಾವೇಶವನ್ನು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಗೋಪಾಲ್ ಗುರು ಉದ್ಘಾಟಿಸಿ ಮಾತನಾಡುತ್ತಾ ಬೌದ್ಧ ಧರ್ಮ ಮನುಷ್ಯ ಕೇಂದ್ರಿತವಾಗಿದ್ದು, ದೇವರಿಗಿಂತ, ಮಾನವೀಯತೆ ಧರ್ಮದ ತಿರುಳಾಗಿದೆ. ಸಮಾನತೆ ಮತ್ತು ಸ್ವಾವಲಂಬನೆಯನ್ನು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
 

`ಮರಳಿ ಮನೆಗೆ' ಕೃತಿಯನ್ನು ಬಿಡುಗಡೆ ಮಾಡಿದರು. ಮಾತನಾಡಿದ ಸಾಹಿತಿ ಹಾಗೂ ವಿಧಾನ ಪರಿಷತ್ ಸದಸ್ಯ ಎಲ್. ಹನುಮಂತಯ್ಯ ಧರ್ಮ ಮತ್ತು ರಾಜಕಾರಣ ಒಂದಾಗಿರುವುದರಿಂದ ಸಮಾಜದಲ್ಲಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಪುರೋಹಿತಶಾಹಿ ವ್ಯವಸ್ಥೆ ಇದಕ್ಕೆ ಕಾರಣವಾಗಿದ್ದು ರಾಜಕೀಯ ಧ್ರುವೀಕರಣವಾಗುವರೆಗೆ ಇದರ ವಿರುದ್ಧ ಹೋರಾಟ ಅಗತ್ಯ ಎಂದು ಅಭಿಪ್ರಾಯಪಟ್ಟರು.
 

ಧರ್ಮವಿರುವುದು ಮಾನವ ಕಲ್ಯಾಣಕ್ಕಾಗಿಯೇ ಹೊರತು ಆತ್ಮದ ಉಳಿವಿಗಲ್ಲ ಎಂದ ಅವರು, ನ್ಯಾಯಪರತೆ, ಸ್ವಾತಂತ್ರ್ಯ ಮತ್ತು ಬಿಡುಗಡೆಯ ಅಸ್ತ್ರವಾಗಿರುವ ಬೌದ್ಧ ಧರ್ಮವನ್ನು ಡಾ. ಅಂಬೇಡ್ಕರ್ ಪುನರುತ್ಥಾನ ಮಾಡಿದ್ದಷ್ಟೇ ಅಲ್ಲದೆ ಪುನರ್ ವ್ಯಾಖ್ಯಾನ ಕೂಡ ನೀಡಿದರು ಎಂದು ಹನುಮಂತಯ್ಯ ತಿಳಿಸಿದರು.
 

ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಸುವರ್ಣ ವರ್ಷಾಚರಣೆ ಸಮಿತಿ ಅಧ್ಯಕ್ಷ ಹಾಗು ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
 

ಸಾಹಿತಿ ದೇವನೂರು ಮಹಾದೇವ, ಮಾಜಿ ಸಚಿವ ಡಾ. ಜೆ. ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.

 

ಇನ್ನಷ್ಟು

ಆಳ್ವಾಸ್ ನುಡಿಸಿರಿ- ೨೦೦೬

ನಾಡೋಜ ಪ್ರಶಸ್ತಿಗೆ ೫ ಜನರ ಆಯ್ಕೆ

೬೦ ಸಾವಿರ ಕ್ವಿ. ಅಡಿಕೆ ಖರೀದಿ : ಅಡಿಕೆ ಮಂಡಳ

ಎಫ್೧:ಅಲ್ಸಾನೋಗೆ ಹೊಸ ಜೋಡಿ ಹ್ಯಾಮಿಲ್ಟನ್

ಭಾರತಕ್ಕೆ ಲಗ್ಗೆ ಇಡಲಿರುವ ಅಲ್‌ಜಜೀರಾ ಚಾನೆಲ್

ಫೈರ್ ಫಾಕ್ಸ್ ಹ್ಯಾಕರ್‍ಸ್ ಪಾಲಿಗೆ ಸುಲಭ ತುತ್ತು?

ವಿದ್ಯುತ್ ದರ ಇಳಿಸಲು `ಅಂಚೆ ಕಾರ್ಡ್ ಚಳುವಳಿ'

ಮುಂಬೈನಲ್ಲಿ ಡೀಸೆಲ್ ಬೆಲೆ ಕಮ್ಮಿ?

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com