|
ಉಗ್ರರಿಗೆ ಹಣ ಪೂರೈಕೆಯ ಕಡಿವಾಣ
ನವದೆಹಲಿ: ಕಾನೂನಿನ ಮೂಲಕ ಭಯೋತ್ಪಾದಕರಿಗೆ
ಪೂರೈಕೆಯಾಗುತ್ತಿರುವ ಹಣವನ್ನು ತಡೆಯಬೇಕು ಎಂದು
ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಶನಿವಾರ ನಡೆದ
ಕಾನೂನು ಭಯೋತ್ಪಾದನೆ ಮತ್ತು ಅಭಿವೃದ್ಧಿಯ ಕುರಿತ
ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
`ಉಗ್ರರಿಗೆ ಪೂರೈಕೆಯಾಗುತ್ತಿರುವ ಹಣವನ್ನು ತಡೆಯಲು ವಿಶೇಷ
ಕಾನೂನಿನ ಅಗತ್ಯವಿದೆಯೆ' ಎನ್ನುವ ಚರ್ಚೆಯಲ್ಲಿ ಪಾಲ್ಗೊಂಡು
ಮಾತನಾಡುತ್ತ ಈಗಿರುವ `ಕಾನೂನು ಬಾಹಿರ ಚಟುವಟಿಕೆ ತಡೆ
ಕಾಯಿದೆ' ಮತ್ತು `ಹಣ ಪೂರೈಕೆ ತಡೆ ಕಾಯಿದೆಗಳೇ ಉಗ್ರರಿಗೆ ಹಣ
ಪೂರೈಕೆ ತಡೆಯಲು ಶಕ್ತವಾಗಿವೆ' ಎಂದು ಅಭಿಪ್ರಾಯ ಪಟ್ಟರು.
`ಕಳ್ಳಸಾಗಾಣಿಕೆ, ಅಕ್ರಮ ನೋಟುಗಳಂತಹ ಗುಂಪು ಅಪರಾಧಿಗಳಿಗೆ
ಮತ್ತು ಭಯೋತ್ಪಾದಕರಿಗೆ ಸಂಬಂಧ ಇರುವುದು ಆತಂಕದ
ವಿಷಯವಾಗಿದೆ. ಉನ್ನತ ಶಕ್ತಿಗಳ ಪ್ರೇರಣೆಯಿಂದ
ಭಯೋತ್ಪಾದಕರು ಆಧುನಿಕ ತಂತ್ರಜ್ಞಾನ ಹೊಂದುವಲ್ಲಿ
ಸಫಲರಾಗಿದ್ದಾರೆ' ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದರು.
`ಅಮಾಯಕ ಪ್ರಜೆಗಳ ಹತ್ಯೆ ಯಾವ ಸರ್ಕಾರವೂ
ಸಹಿಸುವುದಿಲ್ಲ. ಅಸಮಧಾನದಿಂದ ಹಿಂಸೆಗೆ ಇಳಿದಿರುವ ಯಾವುದೇ
ಸಂಘಟನೆಯೊಂದಿಗೆ ಮಾತುಕತೆಗೆ ಸರ್ಕಾರವು ಸಿದ್ಧವಾಗಿದೆ.
ಭಯೋತ್ಪಾದಕರನ್ನು ಯಾವುದೇ ಸಮುದಾಯದೊಂದಿಗೆ
ಗುರುತಿಸಬಾರದು' ಎಂದು ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ಗೃಹ ಸಚಿವ ಶಿವರಾಜ್ ಪಾಟೀಲ್, ಕಾನೂನು ಸಚಿವ
ಎಚ್. ಆರ್. ಭಾರದ್ವಾಜ್, ಅಟಾರ್ನಿ ಜನರಲ್ ಮಿಲನ್ ಕೆ ಬ್ಯಾನರ್ಜಿ ಹೀಗೆ
ಮುಂತಾದ ಗಣ್ಯರು ಹಾಜರಿದ್ದರು.
ಇನ್ನಷ್ಟು
ನಾಡೋಜ ಪ್ರಶಸ್ತಿಗೆ ೫
ಜನರ ಆಯ್ಕೆ
೬೦ ಸಾವಿರ ಕ್ವಿ. ಅಡಿಕೆ ಖರೀದಿ :
ಅಡಿಕೆ ಮಂಡಳ
ಎಫ್೧:ಅಲ್ಸಾನೋಗೆ ಹೊಸ
ಜೋಡಿ ಹ್ಯಾಮಿಲ್ಟನ್
ಭಾರತಕ್ಕೆ ಲಗ್ಗೆ
ಇಡಲಿರುವ ಅಲ್‌ಜಜೀರಾ ಚಾನೆಲ್
ಫೈರ್ ಫಾಕ್ಸ್ ಹ್ಯಾಕರ್‍ಸ್
ಪಾಲಿಗೆ ಸುಲಭ ತುತ್ತು?
ವಿದ್ಯುತ್ ದರ ಇಳಿಸಲು
`ಅಂಚೆ ಕಾರ್ಡ್ ಚಳುವಳಿ'
ಮುಂಬೈನಲ್ಲಿ ಡೀಸೆಲ್ ಬೆಲೆ
ಕಮ್ಮಿ?
|