|
ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ದಾವಣಗೆರೆ: ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ
ರಾಜ್ಯ ಸರ್ಕಾರವು `ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನಿಗಮವನ್ನು
ಸ್ಥಾಪಿಸಬೇಕು' ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ
ಪ್ರೊ.ಸಿ. ನರಸಿಂಹಪ್ಪ ಆಗ್ರಹಿಸಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡುತ್ತ `ಉತ್ತರ ಪ್ರದೇಶದ ಸಕ್ಕರೆ
ಕಾರ್ಖಾನೆ ಅಭಿವೃದ್ಧಿ ನಿಗಮ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಅದರಂತೆ ರಾಜ್ಯದಲ್ಲೂ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನಿಗಮ
ಸ್ಥಾಪಿಸಬೇಕು' ಎಂದು ಹೇಳಿದರು.
`ರಾಷ್ಟ್ರದಾದ್ಯಂತ ೫೨೭ ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ
ಸುಮಾರು ಶೇ.೯೦ರಷ್ಟು ಖಾಸಗೀ ವಲಯದಲ್ಲಿದೆ.
ಮಹಾರಾಷ್ಟ್ರದಲ್ಲಿ ಶೇ. ೯೯ರಷ್ಟು ಸಕ್ಕರೆ ಕಾರ್ಖಾನೆಗಳು ಸಹಕಾರಿ
ವಲಯದಲ್ಲಿದೆ. ಕರ್ನಾಟಕದಲ್ಲಿ ಶೇ.೫೦ ಸಕ್ಕರೆ ಕಾರ್ಖಾನೆಗಳು
ಸಹಕಾರಿವಲಯದಲ್ಲಿದ್ದು ಮುಚ್ಚುವ ಭೀತಿಯಲ್ಲಿವೆ. ಈ
ರೋಗಪೀಡಿತ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಟೆಂಡರ್‌ನ್ನು
ಕರೆಯಲಾಗಿತ್ತಾದರೂ ಯೋಗ್ಯ ಪ್ರತಿಕ್ರಿಯೆ ದೊರೆಯಲಿಲ್ಲ' ಎಂದು
ನರಸಿಂಹಪ್ಪ ವಿವರಿಸಿದರು.
`ರಾಜ್ಯ ಸರ್ಕಾರ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳ ಆರ್ಥಿಕ
ವರದಿಗಳನ್ನು ತಯಾರಿಸಿ ನಾಬಾರ್ಡ್‌ಗೆ ಸಲ್ಲಿಸಬೇಕು.
ಖಾಸಗೀಕರಣದಿಂದ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ
ವ್ಯವಸ್ಥೆಯನ್ನು ಜಾರಿ ತರುವುದರಿಂದ ಮತ್ತೆ ಜೀವ ನೀಡಬಹುದು'
ಎಂದು ನರಸಿಂಹಪ್ಪ ಅಭಿಪ್ರಾಯ ಪಟ್ಟರು.
ಇನ್ನಷ್ಟು
ನಾಡೋಜ ಪ್ರಶಸ್ತಿಗೆ ೫
ಜನರ ಆಯ್ಕೆ
೬೦ ಸಾವಿರ ಕ್ವಿ. ಅಡಿಕೆ ಖರೀದಿ :
ಅಡಿಕೆ ಮಂಡಳ
ಎಫ್೧:ಅಲ್ಸಾನೋಗೆ ಹೊಸ
ಜೋಡಿ ಹ್ಯಾಮಿಲ್ಟನ್
ಭಾರತಕ್ಕೆ ಲಗ್ಗೆ
ಇಡಲಿರುವ ಅಲ್‌ಜಜೀರಾ ಚಾನೆಲ್
ಫೈರ್ ಫಾಕ್ಸ್ ಹ್ಯಾಕರ್‍ಸ್
ಪಾಲಿಗೆ ಸುಲಭ ತುತ್ತು?
ವಿದ್ಯುತ್ ದರ ಇಳಿಸಲು
`ಅಂಚೆ ಕಾರ್ಡ್ ಚಳುವಳಿ'
ಮುಂಬೈನಲ್ಲಿ ಡೀಸೆಲ್ ಬೆಲೆ
ಕಮ್ಮಿ?
|