|
ನಾಡೋಜ ಪ್ರಶಸ್ತಿಗೆ ೫ ಜನರ ಆಯ್ಕೆ
ಹೊಸಪೇಟೆ: ಕನ್ನಡ ನಾಡಿಗೆ ಮಹತ್ವದ ಸೇವೆ ಸಲ್ಲಿಸಿದ
ಕನ್ನಡಿಗರಿಗೆ ಹಂಪಿ ವಿಶ್ವವಿದ್ಯಾಲಯ ನೀಡುವ ೨೦೦೬ನೇ ಸಾಲಿನ ನಾಡೋಜ
ಪ್ರಶಸ್ತಿಗೆ ೫ ಜನರನ್ನು ಆಯ್ಕೆ ಮಾಡಲಾಗಿದೆ.
ಕನ್ನಡಿಗರ ಉದ್ಯೋಗಾವಕಾಶದ ಬಗ್ಗೆ ಅಮೂಲ್ಯ ವರದಿ ನೀಡಿರುವ
ಸರೋಜಿನಿ ಮಹಿಷಿ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಡಾ.
ಕಯ್ಯಾರ ಕಿಞ್ಞಣ್ಣ ರೈ, ರಂಗಭೂಮಿ ಮತ್ತು ಜನಪದ ವಿದ್ವಾಂಸ
ಮುದೇನೂರು ಸಂಗಣ್ಣ, ಸಾಹಿತಿ ಮತ್ತು ಸಂಶೋಧಕ ಡಾ. ಹಂಪ
ನಾಗರಾಜಯ್ಯ ಮತ್ತು ಬಳ್ಳಾರಿಯ ಬುರ್ರಕಥಾದ ಈರಮ್ಮ ನಾಡೋಜ
ಪ್ರಶಸ್ತಿಗೆ ಆಯ್ಕೆ ಆದವರಾಗಿದ್ದಾರೆ.
    
ಡಿ. ೪ರಂದು ನಡೆಯಲಿರುವ ಹಂಪಿ ವಿಶ್ವವಿದ್ಯಾಲಯದ
ಘಟಿಕೋತ್ಸವದಲ್ಲಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ನಾಡೋಜ ಗೌರವ
ಪದವಿಯನ್ನು ಪ್ರದಾನ ಮಾಡಲಿದ್ದಾರೆ. ಮತ್ತು ಉನ್ನತ ಶಿಕ್ಷಣ
ಸಚಿವ ಡಿ.ಎಚ್. ಶಂಕರಮೂರ್ತಿ ಎಂಫೀಲ್ ಪದವಿ ಪ್ರದಾನ
ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಮತ್ತು ನಾಡೋಜ ಪ್ರಶಸ್ತಿ
ಪುರಸ್ಕೃತ ಪಾಟೀಲ್ ಪುಟ್ಟಪ್ಪ ನಾಡಹಬ್ಬದ ಭಾಷಣ ಮಾಡಲಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|