|
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ ಮಕ್ಕಾರ್ ಪುನರಾಯ್ಕೆ
ಅಮೃತ್‌ಸರ್: ಸಿಖ್‌ರ ಶಿರೋಮಣಿ ಗುರುದ್ವಾರ ಪ್ರಬಂಧಕ
ಸಮಿತಿ (ಎಸ್‌ಜಿಪಿಸಿ)ಯ ಮುಖ್ಯಸ್ಥರಾಗಿ ಅವತಾರ್ ಸಿಂಗ್ ಮಕ್ಕಾರ್
ಶನಿವಾರ ನಡೆದ ಚುನಾವಣೆಯಲ್ಲಿ ಪುನರಾಯ್ಕೆ ಆಗಿದ್ದಾರೆ.
ಮಕ್ಕಾರ್ ಎದುರಾಳಿ ಅಕಾಲಿ ಬಂಡಾಯ ಅಭ್ಯರ್ಥಿ ಗುರುವಿಂದರ್ ಸಿಂಗ್
ಶಾಂಪುರ ಅವರನ್ನು ೧೦೪ ಮತಗಳಿಂದ ಸೋಲಿಸಿದ್ದಾರೆ.
ಎಸ್‌ಜಿಪಿಸಿಯ `ಬಾದಲ್' ಉಪ ಸಮಿತಿಯ ಸದಸ್ಯರೂ ಆಗಿರುವ
ಗುರುವಿಂದರ್ ಸಿಂಗ್ ೩೫ ಮತಗಳನ್ನೂ, ಅವತಾರ್ ಸಿಂಗ್ ೧೩೯
ಮತಗಳನ್ನು ಪಡೆದಿದ್ದಾರೆ. ಶಾಂಪುರ ಬಂಡಾಯ ಅಭ್ಯರ್ಥಿಯಾಗಿ
ಹೀನಾಯ ಸೋಲನ್ನುಂಡಿದ್ದಾರೆ.
ನವದೆಹಲಿಯ ಹರವಿಂದರ್ ಸಿಂಗ್, ಓಂಕಾರ್ ಸಿಂಗ್ ಶಾರಿಫುರ,
ಮಲ್ಕಿತ್ ಸಿಂಗ್ ನಾಗಪುರ ಮುಂತಾದವರು ಗುಪ್ತ ಮತದಾನದ
ವೇಳೆಯಲ್ಲಿ ಬಂಡಾಯ ಅಭ್ಯರ್ಥಿಗೆ ಮತ ನೀಡಿದ್ದರು. ಶಾಂಪುರ
ಅವರನ್ನು ೬ ವರ್ಷ ಸಮಿತಿಯ ಪ್ರಾಥಮಿಕ ಸದಸ್ಯತ್ವದಿಂದ
ಉಚ್ಚಾಟಿಸಲಾಗಿದೆ.
ರಘುವೀರ್ ಸಿಂಗ್, ಕೇವಲ್ ಸಿಂಗ್ ಬಾದಲ್ ಮತ್ತು ಸುಖದೇವ್ ಸಿಂಗ್
ಸಮಿತಿಯ ಹಿರಿಯ ಉಪಾಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ.
ಇನ್ನಷ್ಟು
ನಾಡೋಜ ಪ್ರಶಸ್ತಿಗೆ ೫
ಜನರ ಆಯ್ಕೆ
೬೦ ಸಾವಿರ ಕ್ವಿ. ಅಡಿಕೆ ಖರೀದಿ :
ಅಡಿಕೆ ಮಂಡಳ
ಎಫ್೧:ಅಲ್ಸಾನೋಗೆ ಹೊಸ
ಜೋಡಿ ಹ್ಯಾಮಿಲ್ಟನ್
ಭಾರತಕ್ಕೆ ಲಗ್ಗೆ
ಇಡಲಿರುವ ಅಲ್‌ಜಜೀರಾ ಚಾನೆಲ್
ಫೈರ್ ಫಾಕ್ಸ್ ಹ್ಯಾಕರ್‍ಸ್
ಪಾಲಿಗೆ ಸುಲಭ ತುತ್ತು?
ವಿದ್ಯುತ್ ದರ ಇಳಿಸಲು
`ಅಂಚೆ ಕಾರ್ಡ್ ಚಳುವಳಿ'
ಮುಂಬೈನಲ್ಲಿ ಡೀಸೆಲ್ ಬೆಲೆ
ಕಮ್ಮಿ?
|