Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 27 November 2006 06:18 PM

ದೇಶದ ಪ್ರಥಮ ಚಿಟ್ಟೆ ಉದ್ಯಾನದ ಉದ್ಘಾಟನೆ

 

ಬೆಂಗಳೂರು: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್ ಬನ್ನೇರುಘಟ್ಟದಲ್ಲಿ ನಿರ್ಮಿಸಲಾಗಿರುವ ದೇಶದ ಮೊತ್ತಮೊದಲ ಚಿಟ್ಟೆ ಉದ್ಯಾನವನ್ನು ಶನಿವಾರ ಉದ್ಘಾಟಿಸಿದರು.
 

`ನಾವು ಸಾಮಾನ್ಯವಾಗಿ ಜೀವರಾಶಿಯ ತಳಹದಿಯಾಗಿರುವ ಚಿಟ್ಟೆಗಳಂತಹ ಚಿಕ್ಕ ಪ್ರಭೇದಗಳನ್ನು ಮರೆತು ದೊಡ್ಡ ಮತ್ತು ಪ್ರಬಲ ಜೀವಿಗಳನ್ನು ಮಾತ್ರ ಪರಿಗಣಿಸಿಬಿಡುತ್ತೇವೆ. ಭವಿಷ್ಯದ ದೃಷ್ಟಿಯಿಂದ ನಿಸರ್ಗದ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಿದೆ. ಈ ಚಿಟ್ಟೆ ಪಾರ್ಕ್ ಭಾರತೀಯರ ಸ್ಪೂರ್ತಿ ಮತ್ತು ಅಳಿವಿನಂಚಿನಲ್ಲಿರುವ ಜೀವಿಗಳ ಉಳಿಸುವ ಬಗ್ಗೆ ನಮ್ಮ ಕಾಳಜಿಯನ್ನು ತೋರಿಸುತ್ತದೆ' ಎಂದು ಸಿಬಾಲ್ ಹೇಳಿದರು.
 

`ಮೊದಲ ಬಾರಿಗೆ ಚಿಟ್ಟೆಗಳಿಗಾಗಿ ಪ್ರತ್ಯೇಕ ಉದ್ಯಾನವನ ನಿರ್ಮಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಮತ್ತು ಇದು ಜಗತ್ತಿನಲ್ಲಿಯೇ ದೊಡ್ಡ ಚಿಟ್ಟೆ ಉದ್ಯಾನಗಳಲ್ಲಿ ಒಂದಾಗಿದೆ' ಎಂದು ಕರ್ನಾಟಕವನ್ನು ಹೊಗಳಿದರು.
 

ಕರ್ನಾಟಕ ಮೃಗಾಲಯ ಪ್ರಾಧಿಕಾರ, ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ, ಅಶೋಕ ವಾತಾವರಣ ಮತ್ತು ಜೀವಿಪರಿಸರ ಸಂಶೋಧನಾ ಟ್ರಸ್ಟ್ ಜಂಟಿಯಾಗಿ ೫ ಕೋಟಿ ವೆಚ್ಚದಲ್ಲಿ ಸುಮಾರು ೭ ಎಕರೆ ಪ್ರದೇಶದಲ್ಲಿ ಚಿಟ್ಟೆ ಸಂರಕ್ಷಣಾಲಯ ಸ್ಥಾಪಿಸಿವೆ. ಇದು ಸಂಶೋಧನಾ ಪ್ರಯೋಗಾಲಯ ಮತ್ತು ಶಿಕ್ಷಣ ಪ್ರಯೋಗಾಲಯವನ್ನು ಹೊಂದಿದೆ.

 

ಇನ್ನಷ್ಟು

ಆಳ್ವಾಸ್ ನುಡಿಸಿರಿ- ೨೦೦೬

ನಾಡೋಜ ಪ್ರಶಸ್ತಿಗೆ ೫ ಜನರ ಆಯ್ಕೆ

೬೦ ಸಾವಿರ ಕ್ವಿ. ಅಡಿಕೆ ಖರೀದಿ : ಅಡಿಕೆ ಮಂಡಳ

ಎಫ್೧:ಅಲ್ಸಾನೋಗೆ ಹೊಸ ಜೋಡಿ ಹ್ಯಾಮಿಲ್ಟನ್

ಭಾರತಕ್ಕೆ ಲಗ್ಗೆ ಇಡಲಿರುವ ಅಲ್‌ಜಜೀರಾ ಚಾನೆಲ್

ಫೈರ್ ಫಾಕ್ಸ್ ಹ್ಯಾಕರ್‍ಸ್ ಪಾಲಿಗೆ ಸುಲಭ ತುತ್ತು?

ವಿದ್ಯುತ್ ದರ ಇಳಿಸಲು `ಅಂಚೆ ಕಾರ್ಡ್ ಚಳುವಳಿ'

ಮುಂಬೈನಲ್ಲಿ ಡೀಸೆಲ್ ಬೆಲೆ ಕಮ್ಮಿ?

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com