|
ವಿದ್ಯುತ್ ದರ ಇಳಿಸಲು `ಅಂಚೆ ಕಾರ್ಡ್ ಚಳುವಳಿ'
ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ದರ ಕಡಿತಗೊಳಿಸಲು ಹೊರಡಿಸಿದ
ಆದೇಶಕ್ಕೆ ವಿದ್ಯುತ್ ಕಂಪೆನಿಗಳು ತಡೆಯಾಜ್ಞೆ ತಂದಿರುವುದನ್ನು
ಬಳಕೆದಾರರ ವೇದಿಕೆಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಸುಮಾರು
ಮೂರುಸಾವಿರಕ್ಕೂ ಅಧಿಕ ಪತ್ರಗಳನ್ನು ಬರೆಯುವ ಮೂಲಕ
ವಿರೋಧಿಸಿವೆ.
ಸಾಗರದ ಬಳಕೆದಾರರ ವೇದಿಕೆ, ಭಾರತೀಯ ಕಿಸಾನ್ ಸಂಘ,
ಸಕಲೇಶಪುರದ ಕಾಫಿ ಬೆಳೆಗಾರರ ಸಂಘ, ಬಟ್ಕಳ ಬಳಕೆದಾರರ
ವೇದಿಕೆಗಳು ಈ ರೀತಿಯ ವಿರೋಧವನ್ನು ವ್ಯಕ್ತಪಡಿಸಿವೆ.
ಗ್ರಾಮೀಣ ಜನತೆಗೆ ನೀಡುವ ವಿದ್ಯುತ್ ದರದಲ್ಲಿ ೨೦ ಪೈಸೆ ಕಡಿತಗೊಳಿಸಿ
ಸರ್ಕಾರ ಅತ್ಯುತ್ತಮ ಜನಪರ ನಿರ್ಧಾರವನ್ನು ಕೈಗೊಂಡಿತ್ತು. ಅದು
ಜಾರಿಗೆ ಬರುವ ಮೊದಲೇ ವಿದ್ಯುತ್ ಸರಬರಾಜು ಕಂಪೆನಿಗಳು
ತಡೆಯಾಜ್ಞೆ ತಂದಿವೆ. ಆಯೋಗ ಹೊರಡಿಸಿದ್ದ ಆದೇಶವನ್ನು ಜಾರಿ
ಗೊಳಿಸುವಂತೆ ಚಳುವಳಿಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರೈತರ ಈ ಒತ್ತಾಯಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂದು
ಕಾದು ನೋಡಬೇಕಾಗಿದೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|