|
ಫೈರ್ ಫಾಕ್ಸ್ ಹ್ಯಾಕರ್‍ಸ್ ಪಾಲಿಗೆ ಸುಲಭ ತುತ್ತು?
ಬೀಜಿಂಗ್: ಮೋಜಿಲಾ ಸಂಸ್ಥೆಯ ಫೈರ್ ಫಾಕ್ಸ್
ಬ್ರೋಸರ್‌ನಲ್ಲಿನ ದೋಷಗಳು ಹಾ ಕರ್(ಅತಿಕ್ರಮಿ?)ಗಳಿಗೆ
ಸುಲಭವಾಗಿ ನೆಟ್ ಬಳಕೆದಾರರ ಗುಪ್ತಪದಗಳನ್ನು ಅವರ ಖಾಸಗಿ
ವಿಷಯಗಳನ್ನು ಕಬಳಿಸಲು ಸಹಾಯಕವಾಗಿದೆ ಎಂಬ ಅಂಶವನ್ನು
ಚೀನಾದ ಕಂಪ್ಯೂಟರ್ ತಜ್ಞರು ಬಯಲಿಗೆಳಿದ್ದಾರೆ.
ಅಂತರ್ಜಾಲ ತಾಣದಲ್ಲಿ ಹೆಚ್‌ಟಿಎಂಎಲ್ ಫಾರ್ಮ್(ಅರ್ಜಿ)ಗಳನ್ನು ರಚಿಸಿ,
ನಕಲಿ ಹೆಸರಿನಿಂದ ಲಾಗ್ ಇನ್ ಮಾಹಿತಿಗಳನ್ನು ಕಳಿಸುತ್ತಾರೆ. ನಿಮ್ಮ
ಹೆಸರಿನಲ್ಲಿ ಖಾತೆ(ಅಕೌಂಟ್) ತಯಾರಾದ ನಂತರ ನಿಮ್ಮ ಖಾತೆಯ
ಪೂರ್ಣ ವಿವರ ಇನ್ನೊಂದು ವೆಬ್ ಸೈಟ್‌ಗೆ ರವಾನೆಯಾಗುತ್ತದೆ. ಈ
ಮೂಲಕ ಸುಲಭವಾಗಿ ಹ್ಯಾಕರ್‌ಗಳು ಮಾಹಿತಿ ಪಡೆಯುತ್ತಿದ್ದಾರೆ
ಎಂದು ಚಾಪಿನ್ ಮಾಹಿತಿ ಸಂಸ್ಥೆಯ ರಾಬರ್ಟ್ ಚಾಪಿನ್ ಹೇಳುತ್ತಾರೆ.
ಬಳಕೆದಾರರು ತಮ್ಮ ಖಾತೆಗೆ ಲಾಗ್ ಇನ್ ಆಗುವಾಗ ನೀಡುವ ಹೆಸರು
ಹಾಗೂ ಗುಪ್ತಪದ(ಪಾಸ್ ವರ್ಡ್)ಗಳು ಸರಿಯಾದ ಸರ್ವರ್ ಇಂದ
ಬೇಡಿಕೆ ಬಂದಿದೆ ಹಾಗೂ ಅದೇ ಸರ್ವರ್ ಇಂದ ಮಾಹಿತಿ ರವಾನೆ
ಯಾಗುತ್ತಿದೆ ಎಂಬುದರ ಬಗ್ಗೆ ಫೈರ್ ಫಾಕ್ಸ್ ಜಾಗೃತಿ ವಹಿಸಿಲ್ಲ.
ಮೈಕ್ರೊಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೊರರ್ ಕೂಡ ಈ ರೀತಿಯ
ದಾಳಿಯಿಂದ ಹೊರತಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|