Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 25 November 2006 05:29 PM

ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಕೇಂದ್ರ ಒತ್ತಾಯ

 

ಬೆಂಗಳೂರು: ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಿರುವ ಎಪಿಎಂಸಿ ತಿದ್ದುಪಡಿ ಕಾಯಿದೆ ಅಲ್ಪ ಸ್ವಲ್ಪ ತಿದ್ದುಪಡಿಯೊಂದಿಗೆ ಮತ್ತೆ ಜಾರಿಗೆ ಬರಲಿದೆ.
 

ಈಗಾಗಲೇ ದೇಶದ ೨೧ ರಾಜ್ಯಗಳಲ್ಲಿ ಜಾರಿ ಬಂದಿರುವ ಈ ಕಾಯಿದೆಯನ್ನು ಇನ್ನು ಏಕೆYashvantapur APMC Yard ಅಳವಡಿಸಿಕೊಂಡಿಲ್ಲ ಎಂದು ಕೇಂದ್ರ ಪ್ರಶ್ನಿಸಿದೆ.
 

ಎಪಿಎಂಸಿ ಕಾಯಿದೆ ಜಾರಿಯಿಂದ ಎಪಿಎಂಸಿಗಳು ಖಾಸಗೀಕರಣಗೊಳ್ಳಲಿವೆ ಎಂದು ರೈತರು ಮತ್ತು ವರ್ತಕರು ತೀರ್ವ ವಿರೋಧ ವ್ಯಕ್ತ ಪಡಿಸಿದ್ದರಿಂದ ಸಚಿವ ಸಂಪುಟದ ಒಪ್ಪಿಗೆ ದೊರೆತಿದ್ದರೂ ತಡೆ ಹಿಡಿಯಲಾಗಿತ್ತು.
 

ಮೂರು ವಾರಗಳ ಹಿಂದೆ ಮತ್ತೆ ಸಚಿವ ಸಂಪುಟ ಈ ಕಾಯಿದೆಗೆ ಅನುಮೋದನೆ ನೀಡಿದ್ದು ಮುಂದಿನ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
 

ರೈತರ ಅನುಕೂಲಕ್ಕಾಗಿ ಈ ಕಾಯಿದೆ ಅನೇಕ ಅನುಕೂಲಗಳನ್ನು ಒದಗಿಸಿಕೊಡಲಿದೆ. ಎಪಿಎಂಸಿ ತಿದ್ದುಪಡಿ ಕಾಯಿದೆ ಒಳಗೊಂಡಿರುವ ಅಂಶಗಳು ಹೀಗಿವೆ:

ಖಾಸಗಿ ಮಾರ್ಕೆಟ್ ಯಾರ್ಡ್‌ಗಳಿಗೆ ಅವಕಾಶ.


ಕೃಷಿ ಉತ್ಪನ್ನ ವ್ಯಾಪಾರದಲ್ಲಿ ಎಪಿಎಂಸಿ `ಆರ್ಬಿಟ್ರರಿಏಜೆನ್ಸಿ'ಯಾಗಿ ಕೆಲಸ ಮಾಡುತ್ತದೆ.
ರೈತರು ಕಂಪೆನಿಗಳ ಜೊತೆ ಸೇರಿಕೊಂಡು ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡಬಹುದು.
ಉತ್ಪನ್ನಗಳ ಗುಣಮಟ್ಟ ಆಧರಿಸಿ ವಿಂಗಡಿಸಿ ಗ್ರೇಡ್ ನೀಡಲು ಪ್ರತ್ಯೇಕ ವಿಭಾಗವನ್ನೇ ತೆರೆಯಲಾಗುವುದು.
 

ಹೀಗೆ ಮುಂತಾದ ಅಂಶಗಳನ್ನು ಒಳಗೊಂಡಿರುವ ಈ ಕಾಯಿದೆಯಿಂದ ಎಪಿಎಂಸಿಗಳ ಸ್ಥಾಪನೆಯ ಮೂಲ ಉದ್ದೇಶಕ್ಕೇ ಚ್ಯುತಿ ಬರಬಹುದು ಎನ್ನುವುದು ರೈತರ ಆತಂಕವಾಗಿದೆ.

 

ಇನ್ನಷ್ಟು

ಭದ್ರಾ ಮೇಲ್ದಂಡೆ ಯೋಜನೆಗೆ ತಜ್ಞರ ಸಲಹೆ

ರೈಲ್ವೇ ಹಳಿ ಮೇಲೆ ಬಿದ್ದ ನಾಸಿರುದ್ದೀನ್ ಷಾ ಪುತ್ರ

ಮಂಗಳೂರು ಹುಬ್ಬಳ್ಳಿಗೆ ಹೊಸ ರೈಲು

ಹಿಮಾಚಲದಲ್ಲಿ ಆರರಲ್ಲಿ ಒಬ್ಬರ ಬಳಿ ಮೊಬೈಲ್

ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ

ಆಷಸ್ ಸರಣಿ: ಪಾಂಟಿಂಗ್ ಭರ್ಜರಿ ಬ್ಯಾಟಿಂಗ್

ಸುವರ್ಣ ಕಾಯಕ ಯೋಜನೆಗೆ ಚಾಲನೆ

ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು

ಡಿಸೆಂಬರ್ ೧: ಮಂಗಳೂರಲ್ಲಿ ಕೊಂಕಣಿ ಹಬ್ಬ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com