|
ಭಾರತಕ್ಕೆ ಲಗ್ಗೆ ಇಡಲಿರುವ ಅಲ್‌ಜಜೀರಾ ಚಾನೆಲ್
ಕೋಲ್ಕತ್ತಾ: ಭಯೋತ್ಪಾದಕರಿಗೆ ಸಂಬಂಧಿಸಿದ `ಸ್ಕೂಪ್'
ಸುದ್ದಿಗಳನ್ನು ಬಿತ್ತರಿಸಿ ಪರಿಚಿತವಾದ ಅಲ್‌ಜಜೀರಾ ಇಂಗ್ಲಿಷ್ ಸುದ್ದಿ
ವಾಹಿನಿಯು ಭಾರತದಲ್ಲಿ ತನ್ನ ಚಾನೆಲ್ ಪ್ರಾರಂಭಿಸಲು ಭಾರತ
ಸರ್ಕಾರದ ಅನುಮತಿ ಕೋರಿದೆ.
`ಇತ್ತೀಚೆಗೆ ಭಾರತ ಸರ್ಕಾರವನ್ನು ಪ್ರಸಾರದ ಅನುಮತಿ ಕೋರಿ ಅರ್ಜಿ
ಸಲ್ಲಿಸಿದ್ದೇವೆ. ೪೦-೫೦ ದಿನಗಳ ಒಳಗಾಗಿ ಸರ್ಕಾರ ಅನುಮತಿ
ನೀಡುತ್ತದೆ' ಎಂದು ಆಶಿಸುತ್ತೇವೆ. ಸರ್ಕಾರದ ಪರವಾನಿಗೆ ನೀಡಿದ
ನಂತರ ಅಧಿಕೃತವಾಗಿ ಚಾನೆಲ್‌ನ್ನು ಪ್ರಾರಂಭಿಸುವ ದಿನಾಂಕವನ್ನು
ನಿಗದಿಪಡಿಸಲಾಗುತ್ತದೆ. ಈಗಾಗಲೇ ಭಾರತದ ಕೆಲವುಕಡೆ ನಮ್ಮ
ಚಾನೆಲ್‌ನ್ನು ಪಿಎಎಸ್ ೧೦ ಮತ್ತು ಏಷಿಯಾಸ್ಯಾಟ್ ೩ರ ಮೂಲಕ
ಬಿತ್ತರಿಸಲಾಗುತ್ತಿದೆ' ಎಂದು ಅಲ್‌ಜಜೀರಾದ ವಾಣಿಜ್ಯ ನಿರ್ದೇಶಕಿ ಲಿಂಡ್ಸೆ
ಆಲಿವರ್ ಹೇಳಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
೨೪ ಗಂಟೆಗಳ ಕಾಲ ಪ್ರಸಾರವಾಗಲಿರುವ ನಮ್ಮ ಸುದ್ದಿ ಚಾನೆಲ್‌ನ
ವಿಸ್ತಾರವಾದ ಹಂಚಿಕೆಗಾಗಿ ಭಾರತೀಯ ಪಾಲುದಾರರನ್ನು
ಸೇರಿಸಿಕೊಳ್ಳುವ ವಿಚಾರ ಮಾಡಿದ್ದೇವೆ. ಭಾರತೀಯರನೇಕರು
ಇಂಗ್ಲಿಷ್ ಬಲ್ಲವರಾಗಿದ್ದಾರೆ. ಆದ್ದರಿಂದ ಭಾರತದ ಮಾರುಕಟ್ಟೆ
`ಗ್ರೇಟ್' ಎಂದು ಲಿಂಡ್ಸೆ ಶ್ಲಾಘಿಸಿದರು.
`ಭಾರತದಲ್ಲಷ್ಟೇ ಅಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ
ದೇಶಗಳಿಂದಲೂ ಪರವಾನಿಗೆಗೆ ಕಾಯುತ್ತಿದ್ದೇವೆ' ಎಂದು ಲಿಂಡ್ಸೆ
ತಿಳಿಸಿದರು.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|