|
ಡಿ.೧ರಂದು ಸುವರ್ಣ ಸಾವಯವ ಹಬ್ಬ
ಚಿಕ್ಕಮಗಳೂರು: `ಸುವರ್ಣ ಸಾವಯವ ಹಬ್ಬ-೨೦೦೬' ಡಿ. ೧
ಮತ್ತು ೨ರಂದು ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ
ನಡೆಯಲಿದೆ ಎಂದು ಶಾಸಕ ಎಂ. ಪಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರೈತರಲ್ಲಿ ಜೈವಿಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು
ಅವುಗಳನ್ನು ಅಳವಡಿಸಿಕೊಳ್ಳುವಂತೆ ಉತ್ತೇಜಿಸುವುದು ಈ ಹಬ್ಬದ
ಉದ್ದೇಶ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಚೈತನ್ಯ ಕೃಷಿ', `ಹೋಮ', ಪ್ರದರ್ಶನಗಳು ಸುವರ್ಣ
ಸಾವಯವ ಹಬ್ಬದ ಆಕರ್ಷಣೆಗಳಾಗಲಿವೆ. ಇದೇ ಸಂದರ್ಭದಲ್ಲಿ
ಸಾಂಪ್ರದಾಯಿಕ ಕೃಷಿ ಪ್ರದರ್ಶನವನ್ನೂ ಏರ್ಪಡಿಸಲಾಗುವುದು. ಕೃಷಿ
ಮತ್ತು ತೋಟಗಾರಿಕಾ ಸಚಿವರು ಸೇರಿದಂತೆ ಅನೇಕ ತಜ್ಞರು,
ಅನುಭವಿಗಳು ಕಾರ್ಯಾಗಾರಗಳನ್ನು ನಡೆಸಿ ಕೊಡಲಿದ್ದಾರೆ.
ಡಾ. ಚಂದ್ರಶೇಖರ ಅವರು `ಜೈವಿಕ ಕೃಷಿಯಲ್ಲಿ ಹೋಮ ಚಿಕಿತ್ಸೆ',
ಡಾ. ವಿಜಯಂಗಡಿಯವರು `ಸುಲಭ ವಿಧಾನದ ಮಿಶ್ರ ಬೇಸಾಯ'
ವಾರಣಾಸಿ ಕೃಷ್ಣಮೂರ್ತಿಯವರು `ತೋಟಗಾರಿಕಾ ಬೆಳೆಗಳು' ಎ. ಪಿ.
ಚಂದ್ರಶೇಖರ ಮತ್ತು ಡಾ. ಕುಮಾರ್ ಅವರು `ಕೃಷಿ ಉತ್ಪನ್ನಗಳ
ರಫ್ತು' ಎನ್ನುವ ವಿಷಯಗಳ ಮೇಲೆ ಮಾತನಾಡಲಿದ್ದಾರೆ ಎಂದು
ಶಾಸಕ ಕುಮಾರಸ್ವಾಮಿ ತಿಳಿಸಿದರು.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|