|
ಹೊಸ ಮಹಾಭಾರತಕ್ಕೆ ಹೊಸ ಪ್ರತಿಭೆಗಳ ಹುಡುಕಾಟ
ಪಣಜಿ: ಚಿತ್ರ ನಿರ್ಮಾಪಕ ಬಾಬ್ಬಿ ಬೇಡಿ ಮತ್ತು
ಕೊಲೈಡಿಸ್ಕೋಪ್ ಎಂಟರ್‌ಟೈನ್‌ಮೆಂಟ್ ಮಹಾಭಾರತದ ಮೆಗಾ
ಧಾರವಾಹಿಯನ್ನು ನಿರ್ಮಿಸಲಿದೆ. ಇದಕ್ಕೆ ನಟರನ್ನು ಹುಡುಕಲು
ನಾಲ್ಕು ತಿಂಗಳ ಪ್ರತಿಭಾನ್ವೇಷಣೆ ನಡೆಸಲಿದೆ. `ಈ ಯೋಜನೆ ೩೦೦ರಿಂದ
೪೦೦ ಕೋಟಿ ರೂ. ವೆಚ್ಚದಲ್ಲಿ ಮೂರುವರೆ ವರ್ಷ ನಡೆಯಲಿದೆ.
ಭಾರತೀಯ ಮನೋರಂಜನಾ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳ
ಕೊರತೆ ಇದೆ ಮತ್ತು ಮಹಾಭಾರತದಂಥ ಪೌರಾಣಿಕ ಕಥೆಗೆ ಅನೇಕ
ಪಾತ್ರಗಳ ಅಗತ್ಯವಿದೆ. ಆದ್ದರಿಂದ ಪಾತ್ರಗಳ ಆಯ್ಕೆ ಮಾಡಲು ಈ
ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ' ಎಂದು
ಬೇಡಿ ಹೇಳುತ್ತಾರೆ.
ವಿಶೇಷವೇನೆಂದರೆ ದೇಶದಾದ್ಯಂತ ನಡೆಯಲಿರುವ ಈ
ಪ್ರತಿಭಾನ್ವೇಷಣೆಯಲ್ಲಿ ಪೌರಾಣಿಕ ಪಾತ್ರವಾದ `ಅಪ್ಸರೆ'ಗಳನ್ನು
ಆಯ್ಕೆ ಮಾಡಲು ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.
ಇದಲ್ಲದೆ ಮಹಾಭಾರತವನ್ನು ಕುರಿತ ಅನಿಮೇಶನ್ ಮತ್ತು
ಚಿತ್ರಗಳನ್ನುಳ್ಳ ಪುಸ್ತಕಗಳ ನಿರ್ಮಾಣ ಕೂಡಾ ಯೋಜನೆಯ
ಭಾಗವಾಗಿದೆ.
`ಮಂಗಲ ಪಾಂಡೆ' `ಬ್ಯಾಂಡಿಟ್ ಕ್ವೀನ್', `ಮಕ್ಬೂಲ್'ಗಳಂತಹ
ಉತ್ತಮ ಚಿತ್ರಗಳನ್ನು ಬಾಬ್ಬಿ ಬೇಡಿ ನಿರ್ಮಿಸಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|