Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 24 November 2006 05:19 PM

ಜೈಲಿನಲ್ಲಿ ಕೈದಿಗಳ ಸಂಸಾರ?!

 

ಬೆಂಗಳೂರು: ಕರ್ನಾಟಕ ಜೈಲು ಪ್ರಾಧಿಕಾರ ಮದುವೆಯಾದ ಜೈಲುವಾಸಿಗಳಿಗೆ ತಮ್ಮ ಸಂಗಾತಿಯೊಡನೆ ವಾಸಿಸುವಂತೆ ಅನುಕೂಲ ಕಲ್ಪಿಸಲು ಯೋಜನೆ ರೂಪಿಸುತ್ತಿದೆ.
 

`ಎಲ್ಲವೂ ಸರಿಯಾಗಿ ನಡೆದರೆ ಒಂದು ವರ್ಷದ ಒಳಗಾಗಿ ಯೋಜನೆ ಜಾರಿ ಬರಲಿದೆ. ಉಚ್ಚನ್ಯಾಯಾಲಯದ ಈ ಸಲಹೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯನ್ನು ಪರೀಕ್ಷಿಸುತ್ತಿದ್ದೇವೆ' ಎಂದು ಜೈಲು ವಿಭಾಗದ ಹೆಚ್ಚುವರಿ ಪೊಲೀಸ್ ಉಪ ಮಹಾನಿರ್ದೇಶಕ ಎಸ್. ಟಿ. ರಮೇಶ್ ಹೇಳಿದ್ದಾರೆ.
 

ಇತ್ತೀಚೆಗೆ ಜೈಲುವಾಸಿಗಳ ಸುಧಾರಣೆಯ ಮೇಲೆ ನಡೆದ ವಿಚಾರ ಸಂಕಿರಣದಲ್ಲಿ ರಾಜ್ಯದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಈ ವಿಚಾರವನ್ನು ಮಂಡಿಸಿದ್ದರು. `ದೈಹಿಕ ಅವಶ್ಯಕತೆಗಳನ್ನು ಒತ್ತಾಯ ಪೂರ್ವಕವಾಗಿ ತಡೆಹಿಡಿಯುವುದರಿಂದ ಖೈದಿಗಳು ವ್ಯಗ್ರತೆ ಮತ್ತು ಮಾನಸಿಕ ಅಭದ್ರತೆಗಳಿಂದ ಬಳಲುತ್ತಾರೆ' ಎಂದು ನ್ಯಾಯಮೂರ್ತಿ ಅಭಿಪ್ರಾಯ ಪಟ್ಟಿದ್ದರು.
 

ಜೈಲುಗಳಲ್ಲಿ ಹೆಚ್ಚುತ್ತಿರುವ ಸಲಿಂಗಕಾಮದಿಂದ ಹರಡಬಹುದಾದ ಏಡ್ಸ್‌ನಂತಹ ಮಾರಕ ಸಾಂಕ್ರಾಮಿಕ ರೋಗಗಳನ್ನು ನಿರ್ಬಂಧಿಸಲು ಜೈಲುವಾಸಿಗಳಿಗೆ ತಮ್ಮ ಸಂಗಾತಿಯೊಡನೆ ವಾಸಿಸುವಂತೆ ಅನುಕೂಲ ಕಲ್ಪಿಸುವುದು ಉತ್ತಮ ದಾರಿಯಾಗಿದೆ ಎನ್ನುವುದು ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
 

ಯೋಜನೆಯ ಪ್ರಕಾರ ಜೈಲಿನಲ್ಲೆ ಒಂದು ಅಪಾರ್ಟ್‌ಮೆಂಟ್ ನಿರ್ಮಿಸಲಾಗುವುದು. ಅಲ್ಲಿ ಮೂರು ತಿಂಗಳಿಗೊಮ್ಮೆ ಒಂದು ವಾರ ಮದುವೆಯಾದ ಜೈಲುವಾಸಿಗಳು ಸಂಸಾರ ನಡೆಸಬಹುದಾಗಿದೆ.
 

ಜೈಲು ಪ್ರಾಧಿಕಾರವು ಈ ದಿಸೆಯಲ್ಲಿ ಮಾನಸಿಕ ತಜ್ಞರು, ಲೈಂಗಿಕ ತಜ್ಞರು ಮತ್ತು ಮನವ ಹಕ್ಕು ಸಂಘಟನೆಗಳ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಿದೆ.
 

`ಈ ಯೋಜನೆಯ ಬಗ್ಗೆ ಖೈದಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ' ಎಂದು ರಮೇಶ್ ಹೇಳಿದರು.

 

ಇನ್ನಷ್ಟು

ಭದ್ರಾ ಮೇಲ್ದಂಡೆ ಯೋಜನೆಗೆ ತಜ್ಞರ ಸಲಹೆ

ರೈಲ್ವೇ ಹಳಿ ಮೇಲೆ ಬಿದ್ದ ನಾಸಿರುದ್ದೀನ್ ಷಾ ಪುತ್ರ

ಮಂಗಳೂರು ಹುಬ್ಬಳ್ಳಿಗೆ ಹೊಸ ರೈಲು

ಹಿಮಾಚಲದಲ್ಲಿ ಆರರಲ್ಲಿ ಒಬ್ಬರ ಬಳಿ ಮೊಬೈಲ್

ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ

ಆಷಸ್ ಸರಣಿ: ಪಾಂಟಿಂಗ್ ಭರ್ಜರಿ ಬ್ಯಾಟಿಂಗ್

ಸುವರ್ಣ ಕಾಯಕ ಯೋಜನೆಗೆ ಚಾಲನೆ

ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು

ಡಿಸೆಂಬರ್ ೧: ಮಂಗಳೂರಲ್ಲಿ ಕೊಂಕಣಿ ಹಬ್ಬ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com