|
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ
ಸುವರ್ಣ ಕಾಯಕ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಇದೇ
ಸಂದರ್ಭದಲ್ಲಿ ರಾಜ್ಯದಲ್ಲಿ ಕೈಗಾರಿಕೋದ್ಯಮ ಬೆಳೆಯುವಲ್ಲಿ
ಪ್ರಮುಖ ಪಾತ್ರ ವಹಿಸಿದ ನಾರಾಯಣಮೂರ್ತಿ, ಅಜೀಂ ಪ್ರೇಮ್‌ಜಿ
ಸೇರಿದಂತೆ ಇನ್ನು ೧೭ ಯಶಸ್ವಿ ಕೈಗಾರಿಕೋದ್ಯಮಿಗಳನ್ನು
ಸನ್ಮಾನಿಸಲಾಗುವುದು ಎಂದು ರಾಜ್ಯ ಕೈಗಾರಿಕಾ ಸಚಿವ ಕಟ್ಟಾ
ಸುಬ್ರಮಣ್ಯ ನಾಯ್ಡು ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯದ
ಅನೇಕ ಕಡೆಗಳಿಂದ ಸುಮಾರು ೨೫ ಸಾವಿರ ಉದ್ಯೋಗಾಭಿಲಾಷಿಗಳು
ಆಗಮಿಸಲಿದ್ದಾರೆ. ಅಲ್ಲಿ ಅವರ ಹೆಸರಗಳನ್ನು ಪಟ್ಟಿ ಮಾಡಿ ಆಯಾ
ಉದ್ಯಮಗಳಿಗೆ ಸಂದರ್ಶನಕ್ಕಾಗಿ ಕಳುಹಿಸಿಕೊಡಲಾಗುತ್ತದೆ. ಉದ್ಯಮ
೭೫೦ ರೂ. ಮತ್ತು ಸರ್ಕಾರ ೭೫೦ ರೂ. ಸ್ಟೈಫಂಡ್ ನೀಡಲಿವೆ. ೩, ೬,
೯, ೧೨ ಹೀಗೆ ವಿವಿಧ ಅವಧಿಗಳ ತರಬೇತಿಗಳಿದ್ದು ಇದು ಪ್ರಮಾಣ
ಪತ್ರವನ್ನು ಒಳಗೊಂಡಿರುತ್ತದೆ. ತರಬೇತಿಯ ನಂತರ
ಅಭ್ಯರ್ಥಿಗಳು ಯಾವುದೇ ಕಂಪೆನಿ ಸೇರಬಹುದಾಗಿದೆ.
ಸುವರ್ಣ ಕಾಯಕ ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿರುವ ನಿರುದ್ಯೋಗಿಗಳಿಗೆ
ತರಬೇತಿ ನೀಡುವ ವಿಶೇಷ ಯೋಜನೆಯಾಗಿದೆ.
ಈ ತಿಂಗಳ ೨೪ರಿಂದ ನೇಮಕಾತಿ ಆರಂಭವಾಗಲಿದೆ ಎಂದು ಬುಧವಾರ
ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯ್ಡು ತಿಳಿಸಿದರು.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|