|
ಹಿಮಾಚಲ ಪ್ರದೇಶದಲ್ಲಿ ಆರರಲ್ಲಿ ಒಬ್ಬರ ಬಳಿ ಮೊಬೈಲ್
ಶಿಮ್ಲಾ: ಹಿಮಾಚಲ ಪ್ರದೇಶನ್ನು ಹಿಂದುಳಿದ ರಾಜ್ಯಗಳಲ್ಲಿ
ಒಂದೆಂದು ಪರಿಗಣಿಸುತ್ತಾರೆ. ಆದರೆ ಮೊಬೈಲ್ ಫೋನ್ ವಿಷಯದಲ್ಲಿ
ಹಿಮಾಚಲ ಪ್ರದೇಶ ಸಾಕಷ್ಟು ಮುಂದಿದೆ. ಇತ್ತೀಚಿನ ಲೆಕ್ಕಾಚಾರದ
ಪ್ರಕಾರ ಆರು ಜನರಲ್ಲಿ ಒಬ್ಬರು ಮೊಬೈಲ್ ಹೊಂದಿದ್ದಾರೆ.
ಈ ವರ್ಷದ ಅಕ್ಟೋಬರ್‌ವರೆಗಿನ ಅಂಕಿ ಅಂಶಗಳ ಪ್ರಕಾರ ಹಿಮಾಚಲ
ಪ್ರದೇಶದ ಒಟ್ಟು ಜನಸಂಖ್ಯೆ ೬.೨ ಮಿಲಿಯನ್. ಸುಮಾರು ೧.೧
ಮಿಲಿಯನ್ ಜನರು ಈಗಾಗಲೇ ಮೊಬೈಲ್ ಫೋನ್ ಹೊಂದಿದ್ದಾರೆ.
ಮತ್ತು ಇದರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ದುರ್ಗಮವಾದ ಬೆಟ್ಟ ಗುಡ್ಡಗಳಿಂದ ಕೂಡಿದ ಹಿಮಾಚಲ ಪ್ರದೇಶದಲ್ಲಿ
ಸ್ಥಿರ ದೂರವಾಣಿ ಸಂಪರ್ಕ ಅಸಾಧ್ಯ ಮತ್ತು ದುಬಾರಿಯೂ ಆದ್ದರಿಂದ
ಮೊಬೈಲ್ ಇಲ್ಲಿ ಜನಪ್ರಿಯ ಆಗಲು ಕಾರಣವಾಗಿದೆ.
ಮೊತ್ತಮೊದಲು ರಾಜ್ಯಕ್ಕೆ ಕಾಲಿರಿಸಿದ ಏರ್‌ಟೆಲ್ ಅತಿ ಹೆಚ್ಚು (೪೬೮,೬೬೭)
ಗ್ರಾಹಕರನ್ನು ಹೊಂದಿದೆ. ಬಿಎಸ್‌ಎನ್‌ಎಲ್, ರಿಲೆಯನ್ಸ್, ಟಾಟಾ ಇಂಡಿಕಾಂ,
ಐಡಿಯಾ ಕ್ರಮವಾಗಿ ಎರಡು, ಮೂರು, ನಾಲ್ಕು, ಐದು, ಆರನೆಯ
ಸ್ಥಾನದಲ್ಲಿವೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|