|
ಪೆಪ್ಸಿ ಹಾಗೂ ಕೋಕ್‌ಗೆ ಎದುರಾಳಿ ಇರಾನ್ ಪೇಯ
ಉತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆ ಹೊತ್ತು ಇರಾನಿನ
ಜಾಮ್‌ಜಮ್ ತಂಪು ಪಾನೀಯ ಭಾರತದ ಮಾರುಕಟ್ಟೆ
ಪ್ರವೇಶಿಸಲಿದೆ. ಇದರಿಂದ ಕೋಕ ಕೋಲಾ ಹಾಗೂ ಪೆಪ್ಸಿ ಕಂಪೆನಿಗೆ ಒಬ್ಬ
ಎದುರಾಳಿ ಹುಟ್ಟಿದ್ದಂತಾಗುತ್ತದೆ.
ಭಾರತ ಸರ್ಕಾರದ ಕಾನೂನಿನ ಚೌಕಟ್ಟನ್ನು ಮೀರದೆ ಉತ್ತಮ
ಗುಣಮಟ್ಟದ ಉತ್ಪನ್ನವನ್ನು ನೀಡುವುದು ನಮ್ಮ ಉದ್ದೇಶ.
ಜಾಮ್ ಜಮ್ ಪೇಯ ಆರೆಂಜ್, ಲೆಮನ್ ಹಾಗೂ ಕೋಲಾ ಸ್ವಾದದಲ್ಲಿ
ದೊರೆಯಲಿದೆ. ೩೩೦ ಮಿ.ಲೀ ನ ಟಿನ್ ನ ಬೆಲೆ ೧೧ ರುಪಾಯಿಯಾಗಲಿದೆ.
ಮುಂದಿನ ವರ್ಷದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
`ಭಾರತದಲ್ಲಿ ಕಡಿಮೆ ಬೆಲೆಗೆ ಕಾರ್ಮಿಕರು ಹಾಗೂ ಕಚ್ಚಾ ವಸ್ತು
ದೊರೆಯುವುದರಿಂದ ಉತ್ಪನ್ನವನ್ನು ಸರಿಯಾಗಿ ಮಾರುಕಟ್ಟೆಗೆ
ತರಲು ಸಹಾಯಕವಾಗಲಿದೆ' ಎಂದು ಜಾಮ್ ಜಮ್ ಪೇಯದ
ನಿರ್ವಾಹಕ ಹೊಸೈನ್ ಅಬೊಲ್ ಹಸ್ಸನಿ ಹೇಳಿದ್ದಾರೆ.
ಇರಾನಿನಲ್ಲಿ ಶೇ.೪೦ ರಷ್ಟು ಮಾರುಕಟ್ಟೆಯನ್ನು ಹೊಂದಿದ್ದೇವೆ.
ಮಲೇಷಿಯಾ, ಅಫ್ಘಾನಿಸ್ತಾನ, ಟರ್ಕಿ, ಜರ್ಮನಿ, ಪಾಕಿಸ್ತಾನ ಹಾಗೂ
ಬಾಂಗ್ಲಾದೇಶದಲ್ಲಿ ತನ್ನ ಮಾರುಕಟ್ಟೆಯನ್ನು ಜಾಮ್ ಜಮ್
ಸಂಸ್ಥೆ ಹೊಂದಿದೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|