|
ಗಣಿ ಹಗರಣ ವಿಚಾರಣೆ ಸಿಬಿಐ ತೆಕ್ಕೆಗೆ
ಬೆಂಗಳೂರು: ಜನಾರ್ಧನ ರೆಡ್ಡಿ ಮಾಡಿರುವ ಗಣಿ ಲಂಚ
ಆರೋಪ ಸೇರಿದಂತೆ ೨೦೦೦ನೇ ಇಸವಿಯಲ್ಲಿ ನಡೆದ ಎಲ್ಲಾ ಗಣಿ
ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ
ಯು.ಎಲ್. ಭಟ್ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು
ರಚಿಸಿತ್ತು. ಈಗ ಆಯೋಗವು ಗಣಿ ಲಂಚ ತನಿಖೆಯನ್ನು ಸಿಬಿಐಗೆ
ಒಪ್ಪಿಸುವ ನಿರ್ಧಾರ ಮಾಡಿದೆ.
ಈ ಬಗ್ಗೆ ಮಂಗಳವಾರ ಆದೇಶ ಹೊರಡಿಸಿರುವ ಆಯೋಗ ಸಿಬಿಐ ತನಿಖೆಗೆ
ಕೇಂದ್ರ ಸರ್ಕಾರದ ಅನುಮತಿ ಕೇಳುತ್ತಿರುವುದಾಗಿ ಹೇಳಿದೆ.
ಗಣಿ ಲಂಚ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಇನ್ನಿತರ
ಪ್ರಮುಖ ರಾಜಕಾರಣಿಗಳೇ ಭಾಗಿ ಆಗಿರುವ ಆರೋಪ
ಮಾಡಲಾಗಿರುವುದರಿಂದ ರಾಜ್ಯ ಪೊಲೀಸರಿಗೆ ಸೂಕ್ತ ತನಿಖೆ ನಡೆಸಲು
ಆಗದಿರಬಹುದಾದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುತ್ತಿರುವುದಾಗಿ
ಆಯೋಗ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಚೆನ್ನಿಗಪ್ಪ, ಎಂ. ಪಿ.
ಪ್ರಕಾಶ್‌ರ ವಿರುದ್ಧ ೧೫೦ ಕೋಟಿ ರೂ.ಗಳ ಗಣಿ ಲಂಚ ಆರೋಪ
ಮಾಡಿರುವ ಜನಾರ್ಧನ ರೆಡ್ಡಿಯವರಿಗೆ ಆಯೋಗ ನೋಟಿಸ್ ನೀಡಿದರೂ
ತಮ್ಮ ಆರೋಪದ ಬಗ್ಗೆ ದಾಖಲೆ, ಹೇಳಿಕೆಗಳನ್ನು ಆಯೋಗಕ್ಕೆ
ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ತನ್ನ ನ್ಯಾಯಬದ್ಧ ಅಧಿಕಾರವನ್ನು
ಚಲಾಯಿಸಿ ಆಯೋಗವು ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರ್ಧಾರ
ಮಾಡಿದೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|