|
ಮಂಗಳೂರಿಗರನ್ನು ತಣಿಸಲಿರುವ ಕೆಕೆ ಸಂಗೀತ ಲಹರಿ
ಮಂಗಳೂರು: ಕೆಕೆ ಎಂದೇ ಚಿರಪರಿಚಿತರಾಗಿರುವ ಕೃಷ್ಣ
ಕುಮಾರ್ ಮೆನನ್ ಅವರ ಹಾಡುಗಳೆಂದರೆ ಯುವಜನತೆ
ಹುಚ್ಚೆದ್ದು ಕುಣಿಯುತ್ತಾರೆ. ಮಂಗಳೂರಿನ ನೆಹರೂ
ಮೈದಾನದಲ್ಲಿ ನವೆಂಬರ್ ೨೩ರಂದು ಸಂಜೆ ರಸಸಂಜೆ ಕಾರ್ಯಕ್ರಮ
ನಡೆಯಲಿದೆ.

ಚಿಕ್ಕಂದಿನಲ್ಲಿ ಡಾಕ್ಟರ್ ಆಗಬೇಕೆಂದು ಆಸೆ ಹೊಂದಿದ್ದ ಕೆಕೆ. ಮುಂದೆ
ಕಿಶೋರ್ ಕುಮಾರ್ ಅವರ ಹಾಡುಗಳಿಂದ ಪ್ರಭಾವಿತರಾಗಿ
ಹಾಡುವುದಕ್ಕೆ ಮೊದಲು ಮಾಡಿದರು. ಲೆಸ್ಲಿ ಲೂಯಿಸ್ ಅವರಿಂದ ಕೆಲ
ಪಾಠಗಳನ್ನು ಕಲಿತಾದ ಮೇಲೆ ಯುಟಿವಿ ಸಂಸ್ಥೆಯಿಂದ
ಚಿರಪರಿಚಿತರಾದರು.
ಹಿಂದಿಯೂ ಸೇರಿದಂತೆ ಕನ್ನಡ, ತಮಿಳು, ತೆಲುಗು ಹಾಗೂ
ಮಲಯಾಳಂ ಭಾಷೆಗಳಲ್ಲೂ ಇವರ ಗಾನಧಾರೆ ಹರಿದಿದೆ.
ಹಿಂದಿಯಲ್ಲಿ ಮಾಚೀಸ್ ಚಿತ್ರದಲ್ಲಿನ `ಚೋಡ್ ಆಯೇ ಹಮ್ ಹೋ
ಗಲೀಯ' ಯಿಂದ ಹಿಡಿದು ಇತ್ತೀಚಿನ ಗ್ಯಾಂಗ್ ಸ್ಟರ್ ಚಿತ್ರದ `ತು ಹೀ
ಮೇರಿ ಶಬ್ ಹೈ..' ತನಕ ಕೆಕೆ ಅವರ ಹಾಡುಗಳು ಒಂದಕ್ಕಿಂತ
ಒಂದು ಜನಪ್ರಿಯವಾಗಿದೆ.
ಕನ್ನಡದಲ್ಲಿ ಇನ್ನೂ ಬಿಡುಗಡೆಯಾಗದ ಮದನ ಚಿತ್ರದಲ್ಲಿ `ಕಣ್ಣು
ನಿನ್ನದೆ.. ಕನಸು ನಿನ್ನದೆ..' ಈಗಾಗಲೇ ಜನರ ಬಾಯಿಯಲ್ಲಿ
ನಲಿದಾಡುತ್ತಿದೆ.
ಒಟ್ಟಿನಲ್ಲಿ ಮಂಗಳೂರಿನ ಜನ ಕೆಕೆ ಅವರ ಸಂಗೀತಧಾರೆಯಲ್ಲಿ
ಮುಳುಗಲಿದ್ದಾರೆ. ಮಂಗಳೂರಿನ ನಾನಾ ಕಡೆ ಟಿಕೇಟ್‌ಗಳು
ಲಭ್ಯವಿರುತ್ತದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|