|
ಕರಾವಳಿ ಉತ್ಸವಕ್ಕೆ ತೀವ್ರಗೊಂಡ ತಯಾರಿ
ಮಂಗಳೂರು: ಜಿಲ್ಲೆಯ ಉಸ್ತುವಾರಿ ಸಚಿವ ಬಿ. ನಾಗರಾಜ ಶೆಟ್ಟಿ
ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಾವಳಿ ಉತ್ಸವದ
ತಯಾರಿಯ ಬಗ್ಗೆ ಚರ್ಚಿಸಲಾಯಿತು.
ಹೆಚ್ಚು ಹೆಚ್ಚು ಜನರು ಪಾಲ್ಗೊಳ್ಳುವಂತೆ ಈ ಉತ್ಸವವನ್ನು ಆಚರಿಸಲು
ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುತ್ತದೆ ಎಂದು ಸಂಬಂಧಪಟ್ಟ
ಅಧಿಕಾರಿಗಳು ತಿಳಿಸಿದ್ದಾರೆ.
ಉತ್ಸವವು ಸುಸೂತ್ರವಾಗಿ ನಡೆಯಲು ಪ್ರಚಾರ ಸಮಿತಿ, ಆಹಾರ
ಸಮಿತಿ, ಬೀಚ್ ಉತ್ಸವ ಸಮಿತಿ ಹೀಗೆ ಮುಂತಾದ ಸಮಿತಿ ಉಪ
ಸಮಿತಿಗಳನ್ನು ರಚಿಸಲಾಗುವುದು ಎಂದು ಉಪ ಆಯುಕ್ತ ಎಂ.
ಮಹೇಶ್ವರ ರಾವ್ ವಿವರಿಸಿದರು.
ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರಸಿದ್ಧ
ಸಾಹಿತಿಗಳನ್ನು ಆಹ್ವಾನಿಸುವ ವಿಚಾರವಿದ್ದು ಈ ಬಗ್ಗೆ ಡಿ. ೨೧ರಂದು
ಕಾರ್ಯಕ್ರಮ ಪಟ್ಟಿ ಬಿಡುಗಡೆಯಾಗಲಿದೆ.
ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಉತ್ಸವಕ್ಕೆ ಸಂಬಂಧಿಸಿದಂತೆ ಕ್ರೀಡೆ
ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಮೇಯರ್ ವಿಜಯಾ ಅರುಣ್, ವಿಧಾನ ಸಭಾ ಸದಸ್ಯ ಎನ್.
ಯೋಗೀಶ್ ಭಟ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ. ಕೆ.
ಸೀತಾರಾಂ ಕುಲಾಲ್, ನಾ. ದಾಮೋದರ್ ಶೆಟ್ಟಿ ಮತ್ತು ವಿವಿಧ ಇಲಾಖೆಗಳ
ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|