|
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ನವದೆಹಲಿ: ಮಂಗಳವಾರ ನಡೆದ ಮಾತುಕತೆಯು ಚೀನಾ
ಮತ್ತು ಭಾರತದ ನಡುವೆ ಮೈತ್ರಿಯ ಹೊಸ ಅಧ್ಯಾಯಕ್ಕೆ ಎಡೆ
ಮಾಡಿಕೊಟ್ಟಿದೆ.
೧೦೦ ನಿಮಿಷಗಳ ವಿಸ್ತೃತ ಮಾತುಕತೆ ನಡೆಸಿದ ಚೀನಾ ಅಧ್ಯಕ್ಷ ಹು
ಜಿಂಟಾವೊ ಮತ್ತು ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್ ಗಡಿ
ಸಮಸ್ಯೆಗಳನ್ನು ಬಗೆ ಹರಿಸುವ ಹಾಗೂ ಉಭಯ ದೇಶಗಳ
ಮಧುರ ಸಂಬಂಧಕ್ಕಾಗಿ ೧೦ ಅಂಶಗಳ ಕಾರ್ಯಕ್ರಮಕ್ಕೆ ಅನುಮತಿ
ನೀಡಿದರು.
ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ಮತ್ತು ಸಂರಕ್ಷಣೆ ಸೇರಿದಂತೆ
ಇನ್ನೂ ೧೨ ಒಪ್ಪಂದಗಳಿಗೆ ಚೀನಾ ಅಧ್ಯಕ್ಷ ಹು ಜಿಂಟಾವೊ ಮತ್ತು
ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್‌ರ ಸಮ್ಮುಖದಲ್ಲಿ
ಅಂಕಿತ ಹಾಕಲಾಯಿತು.
ಅಂತರರಾಷ್ಟ್ರೀಯ ಪರಮಾಣು ಪ್ರಸರಣ ತಡೆ ನೀತಿಗೆ ಬದ್ಧವಾಗಿ
ಭಾರತ ಸೇರಿದಂತೆ ಎಲ್ಲಾ ದೇಶಗಳ ಜೊತೆ ಶಾಂತಿಯುತ
ಕಾರಣಗಳಿಗೆ ಪರಮಾಣು ಬಳಕೆಗೆ ಸಹಕಾರ ನೀಡಲು ಸಿದ್ಧವಿರುವುದಾಗಿ
ಚೀನಾ ತಿಳಿಸಿದೆ.
ಹಿಂದಿನ ಮೇ ತಿಂಗಳಿನಲ್ಲಿ ಒಪ್ಪಿಗೆ ನೀಡಿದ ಭಾರತ-ಚೀನಾ ರಾಜಕೀಯ
ಸೂತ್ರಗಳ ಅಡಿಯಲ್ಲೆ ಈ ಸೂತ್ರಗಳೂ ರೂಪುಗೊಳ್ಳಲಿದೆ ಎಂದು
ಸಭೆಯ ನಂತರ ಬಿಡುಗಡೆಮಾಡಿದ ಘೋಷಣಾ ಪತ್ರದಲ್ಲಿ
ತಿಳಿಸಲಾಗಿದೆ.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|