|
ಪುನರ್ವಿವಾಹವಾದರೂ ಮಗುವಿನ ಹಕ್ಕು ತಾಯಿ ಪಾಲಿಗೆ
ನವದೆಹಲಿ: ವಿಚ್ಛೇದಿತ ಮಹಿಳೆಯ ಮರುಮದುವೆಯು
ಅವಳು ಮೊದಲ ಗಂಡನಿಂದ ಪಡೆದ ಮಗುವಿನ ಮೇಲಿನ ಹಕ್ಕನ್ನು
ಕಡಿಮೆ ಮಾಡಲಾರದು ಎಂದು ಸರ್ವೋಚ್ಛ ನ್ಯಾಯಾಲಯವು
ಮಹತ್ವದ ತೀರ್ಪಿತ್ತಿದೆ.
ವಿಚ್ಛೇದನ ನೀಡುವಾಗ ಮಹಿಳೆಯೊಬ್ಬರು ತಾನು ಮರು ಮದುವೆ
ಆಗುವುದಿಲ್ಲ ಎನ್ನುವ ಆಶ್ವಾಸನೆ ನೀಡಿ ಮಗುವನ್ನು ತನ್ನ ವಶಕ್ಕೆ
ತೆಗೆದುಕೊಂಡಿದ್ದರು. ಆದರೆ ಕೆಲ ವರ್ಷಗಳ ಬಳಿಕ ಅವರು ಮರು
ಮದುವೆ ಆದರು. ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಮೊದಲ
ಪತಿ ಕೇರಳ ಉಚ್ಛ ನ್ಯಾಯಾಲಯಕ್ಕೆ ಮಗು ತನಗೇ
ಸೇರಬೇಕೆಂದು ಮನವಿ ಸಲ್ಲಿಸಿದರು. ತಾಯಿಯ ಮರುಮದುವೆ
ಮತ್ತು ತಂದೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ
ಕೇರಳ ಉಚ್ಛ ನ್ಯಾಯಾಲಯ ತಂದೆಯ ಪರವಾಗಿ ನಿರ್ಣಯ
ನೀಡಿತ್ತು.
ಇದನ್ನು ಪ್ರಶ್ನಿಸಿ ಮಹಿಳೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ
ಸಲ್ಲಿಸಿದ್ದರು. ಮಗುವಿನ ಇಚ್ಛೆಯನ್ನು ಪರಿಗಣಿಸಿದ ಸರ್ವೋಚ್ಚ
ನ್ಯಾಯಾಲಯ ತಾಯಿಯ ಮರುಮದುವೆಯಿಂದ ತಾಯಿಯು ತನ್ನ
ಮಗುವನ್ನು ಕಾನೂನು ಬದ್ಧವಾಗಿ ವಶಕ್ಕೆ ತೆಗೆದುಕೊಳ್ಳಲು
ತೊಡಕಾಗದು ಎಂದು ತೀರ್ಮಾನ ನೀಡಿದೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|