Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 22 November 2006 05:01 PM

`ಬಹುರೂಪಿ'ಯನ್ನು ಉದ್ಘಾಟಿಸಲಿರುವ ಕಾರ್ನಾಡ್

 

ಮೈಸೂರು: ಖ್ಯಾತ ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ್ ಅವರು ರಂಗಾಯಣದ ೩ನೇ `ಬಹುರೂಪಿ' ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
 

ಡಿಸೆಂಬರ್ ೭ರಂದು ಕಲಾಮಂದಿರದಲ್ಲಿ ನಾಟಕೋತ್ಸವು ಸಂಜೆ ೫:೩೦ ರ ನಂತರ ಪ್ರಾರಂಭಗೊಳ್ಳಲಿದೆ.
 

ಡಿಸೆಂಬರ್ ೫ ರಂದು ಮಧ್ಯಾಹ್ನ ೩:೩೦ ರ ಸುಮಾರಿಗೆ ನಗರದ ಚಿಕ್ಕ ಗಡಿಯಾರದ ಸಮೀಪ ಪತ್ರಕರ್ತೆ ವಿಜಯಮ್ಮ ನಾಟಕಗಳಿಗೆ ಚಾಲನೆ ನೀಡಲಿದ್ದಾರೆ. ಅದೇ ದಿನ ಜಾನಪದ ಕಲಾವಿದ ಬಸವರಾಜ ಮಾಲಾಶೆಟ್ಟಿ `ಮನೆ ಮನೆ ರಂಗೋತ್ಸವ'ವನ್ನು ಪಡುವರಹಳ್ಳಿಯ ಬಳಿ ಪ್ರಾರಂಭಿಸಲಿದ್ದಾರೆ.
 

ಡಿಸೆಂಬರ್ ೬ ರಂದು ವನರಂಗದಲ್ಲಿ ನಡೆಯುವ ಪುಸ್ತಕ ಪ್ರದರ್ಶನ, ಗುಡಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗು ವ್ಯವಸಾಯೋತ್ಪನ್ನಗಳ ಪ್ರದರ್ಶನವನ್ನು ನಟಿ ಗಿರಿಜಾ ಲೋಕೇಶ್ ಉದ್ಘಾಟಿಸಲಿದ್ದಾರೆ.
 

ಚಲನಚಿತ್ರೋತ್ಸವವನ್ನು ಡಿಸೆಂಬರ್ ೭ ರಂದು ಬೆಳಗ್ಗೆ ೧೦:೩೦ಕ್ಕೆ ರಂಗಾಯಣದ ಆವರಣದಲ್ಲಿರುವ ಹೆಚ್‌ಎಲ್‌ಎನ್ ಸಿಂಹ ಚಿತ್ರಮಂದಿರದಲ್ಲಿ ಉದ್ಘಾಟಿಸಲಿದ್ದಾರೆ.
 

ಡಿಸೆಂಬರ್ ೭ ರಿಂದ ೧೨ರ ವರೆಗೂ ನಡೆಯುವ ನಾಟಕ ಸ್ಫರ್ಧೆಯಲ್ಲಿ ಹಿಂದಿ, ಗುಜರಾತಿ, ಮಲಯಾಳಂ ಹಾಗೂ ಕನ್ನಡ ನಾಟಕಗಳು ಪ್ರದರ್ಶಿತವಾಗಲಿದೆ.
 

ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಾಟಕಕಾರ ಚಂದ್ರಶೇಖರ ಕಂಬಾರ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಮಾಸ್ಟರ್ ಹಿರಣ್ಣಯ್ಯ, ಎನ್‌ಎಸ್‌ಡಿ ಅಧ್ಯಕ್ಷ ಡಿ.ಆರ್. ಅಂಕುರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಪ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ರಂಗಾಯಣದ ನಿರ್ದೇಶಕ ಚಿದಂಬರ ರಾವ್ ಜಂಬೆ ಸುದ್ದಿಗಾರರಿಗೆ ಹೇಳಿದರು.

 

ಇನ್ನಷ್ಟು

ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ

ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ

ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ

`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ

ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ

ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ

ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com