|
ಜಿಎಂ ಮೋಟರ್‍ಸ್‌ನಿಂದ ಪವರ್ ಟೈನ್ ಘಟಕ
ಮುಂಬಯಿ: ಟಯೋಟಾ ಸಂಸ್ಥೆಯೊಡನೆ ಸ್ಪರ್ಧೆಗೆ ಇಳಿದಿರುವ
ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾದ ಜಿಎಂ ಮೋಟರ್ ಸಂಸ್ಥೆ
ಭಾರತದಲ್ಲಿ ಪವರ್ ಟ್ರೈನ್ ತಯಾರಿಕಾ ಘಟಕ ಸ್ಥಾಪಿಸುವ
ಯೋಜನೆಯಲ್ಲಿದೆ.
ಮಹಾರಾಷ್ಟ್ರ ಸರ್ಕಾರದೊಡನೆ ಈ ಬಗ್ಗೆ ಒಡಂಬಡಿಕೆ ಮಾಡಿಕೊಂಡಿರುವ
ಜಿಎಂ ಮೋಟರ್ಸ್ ಸಂಸ್ಥೆ ಸುಮಾರು ೧,೩೫೦ ಕೋಟಿ ವೆಚ್ಚ ಈ
ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಿದೆ.
`ಪವರ್ ಟ್ರೈನ್ ಘಟಕ ಸ್ಥಾಪನೆಗೆ ಕಮ್ಮಿಯಂದರೂ ಸುಮಾರು
೩೦೦ ಮಿಲಿಯನ್ ಡಾಲರ್ ಅವಶ್ಯಕತೆ ಇರುತ್ತದೆ. ಭಾರತಲ್ಲಿ ನಮ್ಮ
ಉತ್ಪನ್ನಗಳನ್ನು ಲಾಭದಾಯಕವಾಗಿ ಮಾರುವಂತಾದರೆ ನಾವು
ಹಾಕಿರುವ ಬಂಡವಾಳಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ' ಎಂದು ಜಿಎಂ
ಮೋಟರ್ಸ್, ಭಾರತದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಬ್ಬಾ
ಹೇಳಿದ್ದಾರೆ.
`ಹೊಸ ಬಗೆಯ ಡಿಸೇಲ್ ಇಂಜಿನ್ ಉಳ್ಳ ಎವಿಯೋ ಹಾಗೂ ಸ್ಪಾರ್ಕ್
ಕಾರುಗಳನ್ನು ೨೦೦೮ ರ ಒಳಗೆ ಮಾರುಕಟ್ಟೆಗೆ ಬರುವಂತೆ
ಮಾಡಲಾಗುವುದು' ಎಂದು ರಾಜೀವ್ ಹೇಳಿದರು.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|