|
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ತುಮಕೂರು: ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ
`ಮಹಾನದಿ' ಗೆ ಈ ಸಾಲಿನ ವೀಚಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ
ವಿಷಯವನ್ನು ತುಮಕೂರು ನಗರದ ವೀಚೀ ಸಾಹಿತ್ಯ ಪ್ರತಿಷ್ಠಾನ
ಪ್ರಕಟಿಸಿದೆ.
ಪೊ. ಎಂ.ಜಿ. ಚಂದ್ರಶೇಖರಯ್ಯ, ರಾಮಲಿಂಗಪ್ಪ ಟಿ.ಬೇಗೂರು
ಮತ್ತು ಆರ್. ತಾರಿಣಿ ಶುಭದಾಯಿನಿ ಅವರನ್ನು ಒಳಗೊಂಡ ಆಯ್ಕೆ
ಸಮಿತಿಯು ಪ್ರಶಸ್ತಿಗೆ ಬಂದ ೧೨೩ ಕೃತಿಗಳನ್ನು ಪರಿಶೀಲಿಸಿ,
ಅಂತಿಮವಾಗಿ `ಮಹಾನದಿ' ಕೃತಿಯನ್ನು ಆರಿಸಿದರು ಎಂದು ಪ್ರತಿಷ್ಠಾನದ
ಕಾರ್ಯದರ್ಶಿ ಎಂ.ಎಚ್. ನಾಗರಾಜು ತಿಳಿಸಿದ್ದಾರೆ.
ತುಮಕೂರಿನ ಸುತ್ತಮುತ್ತಲಿನ ಪರಿಸರವನ್ನು, ಗ್ರಾಮೀಣ ಬದುಕಿನ
ಶೋಷಣೆಯ, ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯದ ವಿರುದ್ದ
ಹೋರಾಡುವ ಮಹಿಳೆಯ ಕಥಾನಕವನ್ನು `ಮಹಾನದಿ' ಕೃತಿಯು
ಹೊಂದಿದೆ.
ಜಾಣಗೆರೆ ವೆಂಕಟರಾಮಯ್ಯ ಅವರು ಕನ್ನಡ ನಾಡು ನುಡಿಯ
ಹೋರಾಟಗಾರರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|