|
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಮುಂಬೈ: ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಅವರ
ಪುತ್ರ ರಾಹುಲ್ ಮಹಾಜನ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಹುಲ್
ಅವರು ತಾವು ಎರಡೂವರೆ ತಿಂಗಳುಗಳ ಹಿಂದೆಯಷ್ಟೆ ಪ್ರೀತಿಸಿ
ಮದುವೆಯಾದ ಶ್ವೇತರವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ
ನೀಡಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿವೆ.
ಮಾಧ್ಯಮಗಳ ಪ್ರP ರ ರಾಹುಲ್‌ರೊಂದಿಗೆ ಮದುವೆಯಾದ
ಕೆಲವೇ ದಿನಗಳಲ್ಲೇ ಶ್ವೇತಾ ಮಾನಸಿಕ ಮತ್ತು ದೈಹಿಕ ಹಿಂಸೆಗೆ
ಒಳಗಾಗಿದ್ದಾರೆ. ಇತ್ತೀಚಿನವರೆಗೂ ಅಂದರೆ ನವೆಂಬರ್ ೧೫ರ ತನಕವೂ ಈ
ಹಿಂಸಾಚಾರ ಮುಂದುವರಿದಿದೆ ಎಂದು ಮಾಧ್ಯಮಗಳು ಹೇಳಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ `ನಾನು ಒಂದು ದಿನವೂ ಶ್ವೇತಾಳ
ಮೇಲೆ ಕೈ ಮಾಡಿಲ್ಲ. ಈ ಬಗ್ಗೆ ಮುಂದೆ ಒಂದು
ಪತ್ರಿಕಾಗೋಷ್ಠಿಯನ್ನು ಕರೆಯುತ್ತೇನೆ' ಎನ್ನುತ್ತಾರೆ. ಶ್ವೇತಾ
ಕೂಡಾ `ಸದ್ಯಕ್ಕೆ ನಾನು ಮತ್ತು ರಾಹುಲ್ ಮುಂಚಿತವಾಗಿ ಪ್ಲಾನ್
ಮಾಡಿದಂತೆ ಡೆಹೆರಾಡೂನ್‌ನಲ್ಲಿ ರಜೆಯನ್ನು ಕಳೆಯಲು
ಬಂದಿದ್ದೇವೆ. ನನ್ನ ಮತ್ತು ರಾಹುಲ್ ನಡುವೆ ಯಾವುದೇ
ವೈಮನಸ್ಸು ಇಲ್ಲ' ಎಂದು ಹಿಂಸಾಚಾರದ ಸುದ್ದಿಯನ್ನು
ಅಲ್ಲಗಳೆಯುತ್ತಾರೆ.
`ಗಂಡ ಹೆಂಡತಿ ಈಗಾಗಲೇ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ.
ಶ್ವೇತಾ ರಾಹುಲ್ ಅವರನ್ನು ವಿಚ್ಛೇದನ ನೀಡುವಂತೆ ಕೇಳಿದ್ದಾರೆ.
ಆದರೆ ಮುಂದಿನ ರಾಜಕೀಯ ಭವಿಷ್ಯ ಮತ್ತು ಡ್ರಗ್ಸ್ ಕೇಸಿನ
ವಿಚಾರಣೆ ನಡೆಯುತ್ತಿರುವುದರಿಂದ ರಾಹುಲ್ ಶ್ವೇತಾರವರಿಗೆ
ವಿಚ್ಛೇದನ ನೀಡಲು ನಿರಾಕರಿಸಿದ್ದಾರೆ' ಎಂದು ಮಹಾಜನ್ ಕುಟುಂಬದ
ಸಮೀಪವರ್ತಿಯೊಬ್ಬರು ಹೇಳಿದ್ದಾರೆ.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|