Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 20 November 2006 02:47 PM

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ

 

ಧರ್ಮಸ್ಥಳ: ಧರ್ಮಸ್ಥಳದ ಲಕ್ಷ ದೀಪೋತ್ಸವ ಮಹೋತ್ಸವದ ಅಂಗವಾಗಿ ನಡೆದ ೭೪ನೇ ಸರ್ವಧರ್ಮ ಸಮ್ಮೇಳನವನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಉದ್ಘಾಟಿಸಿದರು.

 

`ಕತ್ತಲೆಯು ಅಜ್ಞಾನದ ಸಂಕೇತವಾಗಿದ್ದರೆ ಬೆಳಕು ಜ್ಞಾನದ ಸಂಕೇತ. ಶ್ರೀಧರ್ಮಸ್ಥಳದಿಂದ ಅಪಾರ ಜ್ಞಾನ ಸಿಗುತ್ತದೆ. ಎಲ್ಲಾ ಕಾರ್ಯಗಳನ್ನು ಎಲ್ಲಾ ಆಯಾಮಗಳ ಮೂಲಕ ಸೂಕ್ಷ್ಮವಾಗಿ ಅಚ್ಚುಕಟ್ಟಾಗಿ ನಡೆಸುವಂತಹ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವುದು ಹೆಮ್ಮೆಯ ವಿಷಯ' ಎಂದು ಸಚಿವ ಆಚಾರ್ಯ ಈ ಸಂದರ್ಭದಲ್ಲಿ ಹೇಳಿದರು.
 

`ಜನರನ್ನು ರಕ್ಷಿಸುವುದರ ಮೂಲಕ ಉನ್ನತಿಯ ಮಾರ್ಗವನ್ನು ತೋರಿಸುವುದೇ ಧರ್ಮ. ನಾವೆಲ್ಲರೂ ಕರ್ಮದ ಸರೋವರಕ್ಕೆ ತಳ್ಳಲ್ಪಟ್ಟಿದ್ದೇವೆ. ಕಷ್ಟಗಳನ್ನು ಎದುರಿಸುವುದರಲ್ಲಿ ನಮ್ಮ ಜಾಣ್ಮೆಯಿದೆ. ಧ್ಯಾನ, ಜ್ಞಾನ, ಭಕ್ತಿಗಳಿಂದ ಭಗವಂತನಿಗೆ ಶರಣಾಗಬೇಕು. ಪ್ರಸನ್ನಚಿತ್ತರಾಗಿ ಕಷ್ಟಗಳನ್ನು ಎದುರಿಸಲು ಕಲಿಯಬೇಕು'.
 

`ಜ್ಞಾನ, ಭಕ್ತಿ, ಧ್ಯಾನ, ಯೋಗದಿಂದ ನಿಕೃಷ್ಟ ಗರ್ವವನ್ನು ತ್ಯಜಿಸಬೇಕು. ಪೂಜೆSukhabodhanada ಸಂಕೀರ್ತನೆಗಳಲ್ಲಿ ಸಕರಾತ್ಮಕ ಭಾವನೆಯಿರಬೇಕು. ಭಗವಂತನಿಗೆ ಭಕ್ತಿಯಿಂದ ಎಲೆ ಅರ್ಪಿಸಿದರೂ ಸಾಕು. ಸಮಸ್ಯೆಗಳನ್ನು ದೂರುವ ಬದಲು ಸಮಾಧಾನ ಹುಡುಕಲು ಪ್ರಯತ್ನಿಸಬೇಕು' ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸುಖಭೋದಾನಂದಜೀ ಹೇಳಿದರು.
 

Veerendra Heggadeಸಮ್ಮೇಳನದಲ್ಲಿ ನೆರೆದಿದ್ದವರನ್ನು ಸ್ವಾಗತಿಸಿದ ಡಾ. ವಿರೇಂದ್ರ ಹೆಗ್ಗಡೆಯವರು ಮಾತನಾಡುತ್ತ `ಇಂದಿನ ಸರ್ಕಾರ ಮತ್ತು ಕಾನೂನುಗಳು ಸಮಾಜವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಜನಜೀವನದಲ್ಲಿ ಧರ್ಮದ ಅನುಸರಣೆಯ ಪ್ರವೃತ್ತಿ ಕಡಿಮೆಯಾದಂತೆ ಕಂಡು ಬರುವುದರಿಂದ ಸಮ್ಮೇಳನಗಳ ವೇದಿಕೆಯಿಂದ ನೀಡಲಾಗುವ ಸಂದೇಶಗಳಿಗೆ ವಿಶೇಷ ಮಹತ್ವವಿದೆ' ಎಂದರು.
 

ಇದೇ ಸಂದರ್ಭದಲ್ಲಿ `ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ಅಗರಬತ್ತಿಗಳನ್ನು ಹಾಗೂ `ರಂಗೋಲಿ' ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

 

ಇನ್ನಷ್ಟು

ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ

ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ

ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ

ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ

ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ

ಹತ್ತು ಔಷಧಗಳ ಮಾರಾಟ ನಿಷೇಧ

ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com