|
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಬೆಂಗಳೂರು: `ಕಪ್ಪು ಹಣದ ಸಹಾಯವಿಲ್ಲದೇ ಯಾವ
ಚುನಾವಣೆಯನ್ನೂ ಗೆಲ್ಲಲು ಸಾಧ್ಯವಿಲ್ಲ. ಉದ್ಯಮಿಗಳು ಕೂಡಾ
ಚುನಾವಣೆಯಲ್ಲಿ ಹಣ ಹೂಡಲು ಸಿದ್ಧರಾಗುತ್ತಾರೆ. ಸಣ್ಣ ಪುಟ್ಟ
ಪಕ್ಷಗಳಿಗೆ ಉದ್ಯಮಿಗಳು ಲಕ್ಷಗಳಲ್ಲಿ ಹಣ ನೀಡಿದರೆ, ರಾಷ್ಟ್ರೀಯ
ಪಕ್ಷಗಳಿಗೆ ಅವುಗಳ ಎಲ್ಲಾ ಚುನಾವಣಾ ವೆಚ್ಚಗಳನ್ನು
ಭರಿಸುತ್ತಾರೆ' ಎಂದು ಜಾತ್ಯಾತೀತ ಜನತಾದಳದ ಮುಖಂಡ
ದೇವೇಗೌಡ ಸ್ವತಃ ಹೇಳಿದ್ದಾರೆ.
ಗೌಡರು ನಗರದಲ್ಲಿ ಭಾನುವಾರ ನಡೆದ ರಾಜ್ಯ ಮಾಜಿ ಶಾಸಕರ
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಗೌಡರು `ಒಂದು ಕಾಲದಲ್ಲಿ
ಮಾಜಿ ಶಾಸಕರಿಗೆ ಮಾಸಾಶನವನ್ನು ನೀಡುವ ವಿಧೇಯಕವನ್ನು
ವಿರೋಧಿಸಿದ್ದೆ. ಆದರೆ ಈಗ ಕೆಲವು ಮಾಜಿ ಶಾಸಕರನ್ನು ನೋಡಿದರೆ ಈ
ವಿಧೇಯಕದ ಅಗತ್ಯವಿದೆ ಎನಿಸುತ್ತಿದೆ. ಈ ಕುರಿತಾಗಿ ಮುಖ್ಯಮಂತ್ರಿ
ಕುಮಾರಸ್ವಾಮಿ ಹತ್ತಿರ ಮಾತನಾಡುತ್ತೇನೆ' ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಂ. ಜಿ.
ಸತ್ಯನಾರಾಯಣ, ಅಖಿಲ ಭಾರತ ಮಾಜಿ ಶಾಸಕರ ಸಂಘದ ಅಧ್ಯಕ್ಷ
ಶಂಕರ್ ರಾವ್ ಗುರು, ವಿಧಾನ ಸಭಾಧ್ಯಕ್ಷ ಕೃಷ್ಣ
ಉಪಸ್ಥಿತರಿದ್ದರು.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|