|
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ಚಿಕ್ಕಮಗಳೂರು: ರಾಜ್ಯದ `ಕಾಫಿ ವ್ಯಾಲಿ' ಎನ್ನಲಾಗುವ
ಚಿಕ್ಕಮಗಳೂರು ಜಿಲ್ಲೆ ತನ್ನ ಲೋಕಸಭಾ ಕ್ಷೇತ್ರವನ್ನು
ಕಳೆದುಕೊಳ್ಳುವ ಸಾಧ್ಯತೆಯಿದೆ.
ನ್ಯಾಯಮೂರ್ತಿ ಕುಲದೀಪ್ ಸಿಂಗ್ ವರದಿಯನ್ನು ಹಾಗೆಯೇ
ಅನುಷ್ಠಾನಗೊಳಿಸಿದರೆ ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರವನ್ನು
ಒಡೆದು ೪ ಬೇರೆ ಕ್ಷೇತ್ರಕ್ಕೆ ಹಂಚಲಾಗುತ್ತದೆ. ಈಗ ಸದ್ಯ
ಚಿಕ್ಕಮಗಳೂರು ಕ್ಷೇತ್ರವು ಕಾರ್ಕಳ ಹಾಗೂ ಬೆಳ್ತಂಗಡಿ ಸೇರಿದಂತೆ
೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಈಗಿನ ವರದಿಯಂತೆ ಕಾರ್ಕಳ ಉಡುಪಿ ಜಿಲ್ಲೆಯ ಲೋಕಸಭಾ
ಕ್ಷೇತ್ರಕ್ಕೆ ಸೇರುತ್ತದೆ. ಬೆಳ್ತಂಗಡಿ ದಕ್ಷಿಣ ಕನ್ನಡ ಕ್ಷೇತ್ರಕ್ಕೆ
ಸೇರುತ್ತದೆ. ಉಳಿದಂತೆ ಬೀರೂರು ಮತದಾನ ಕ್ಷೇತ್ರವಾಗಿ ಉಳಿದಿಲ್ಲ.
ಕಡೂರು ಹಾಸನ ಕ್ಷೇತ್ರಕ್ಕೆ ಮತ್ತು ತರೀಕೆರೆಯು
ಶಿವಮೊಗ್ಗಕ್ಕೆ ಸೇರಿದರೆ ಉಳಿಯುವುದು ಚಿಕ್ಕಮಗಳೂರು,
ಮೂಡಿಗೆರೆ ಮತ್ತು ಶೃಂಗೇರಿ ಮತದಾನ ಕ್ಷೇತ್ರ ಮಾತ್ರ. ಈ
ಮೂರು ಕ್ಷೇತ್ರಗಳು ಉಡುಪಿ ಲೋಕಸಭಾ ಕ್ಷೇತ್ರಕ್ಕೆ
ಸೇರಿಸಲ್ಪಡುತ್ತದೆ.
ಉಡುಪಿ ಕ್ಷೇತ್ರಕ್ಕೆ ಸೇರಿದ ಆಸ್ಕರ್ ಫರ್ನಾಂಡಿಸ್ ಮತ್ತು
ಮಾರ್ಗರೇಟ್ ಆಳ್ವಾ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ
ಸ್ಥಾನದಲ್ಲಿರುವುದರಿಂದ ಚಿಕ್ಕಮಗಳೂರು ಕ್ಷೇತ್ರಕ್ಕಿಂತ ಉಡುಪಿ
ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ದೊರೆಯುವ ಸಾಧ್ಯತೆ ಇದೆ.
೭೦ರ ದಶಕದಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರನ್ನು
ಗೆಲ್ಲಿಸಿದ ಕೀರ್ತಿಯನ್ನು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
ಹೊಂದಿದೆ.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|