|
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಬೆಂಗಳೂರು: ಯುಪಿಎ ಸರ್ಕಾರದ ಅಪಾಯಕಾರಿ ನೀತಿಗಳನ್ನು
ವಿರೋಧಿಸಲು ರಾಜ್ಯ ಬಿಜೆಪಿ ಭಾನುವಾರ ಅರಮನೆ ಮೈದಾನದಲ್ಲಿ
`ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶ'ವನ್ನು
ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.
ಅಡ್ವಾಣಿ `ದೇಶದ ಭದ್ರತೆಯನ್ನು ನಿರ್ಲಕ್ಷಿಸಿ ಓಟ್ ಬ್ಯಾಂಕಿನ ಆಸೆಗೆ
ಕೇಂದ್ರ ಯುಪಿಎ ಸರ್ಕಾರವು ಭಯೋತ್ಪಾದನಾ ಚಟುವಟಿಕೆಗೆ
ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ. ಗಲ್ಲು ಶಿಕ್ಷೆಗೆ
ಗುರಿಯಾಗಿರುವ ಅಫ್ಜಲ್‌ಗೆ ಕ್ಷಮಾದಾನ ನೀಡದಂತೆ ಆಗ್ರಹಿಸಿ ಎಲ್ಲಾ
ಭಾರತೀಯರು ರಾಷ್ಟ್ರಪತಿಯವರಿಗೆ ಪತ್ರ ಬರೆಯಬೇಕು' ಎಂದು
ಕೋರಿದರು.
`ಭಯೋತ್ಪಾದನೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು
ಬರುತ್ತಿರುವ ದೇಶವಾದ ಪಾಕಿಸ್ತಾನದೊಂದಿಗೆ ಭಯೋತ್ಪಾದನೆ
ಮಟ್ಟಹಾಕುವ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದ. ಇದು
೧೯೯೩ರಲ್ಲಿ ನಡೆದ ಮುಂಬೈ ಬಾಂಬ್ ಸ್ಫೋಟದ ತನಿಖೆಯನ್ನು
ದಾವೂದ್ ಜೊತೆ ಸೇರಿ ನಡೆಸಿದಂತೆ' ಎಂದು ಅಡ್ವಾಣಿ ವ್ಯಂಗ್ಯವಾಡಿದರು.
ಮೀಸಲಾತಿಯ ಬಗ್ಗೆಯೂ ಕೂಡಾ ಮಾತನಾಡಿದ ಅಡ್ವಾಣಿ `ಧರ್ಮದ
ಆಧಾರದ ಮೇಲೆ ಮೀಸಲಾತಿಯನ್ನು ನೀಡುವುದನ್ನು ಉಗ್ರವಾಗಿ
ವಿರೋಧಿಸುವುದಾಗಿ' ಹೇಳಿದರು.
ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿ ಓಂಪ್ರಕಾಶ್
ಕೋಹ್ಲಿ, ಹಾಗೂ ರಾಜ್ಯ ಉಸ್ತುವಾರಿ ಸಚಿವ ಥಾವರ್‌ಚಂದ್ ಗೆಲ್ಹೋಟ್,
ಸಂಸದ ಅನಂತ್ ಕುಮಾರ್, ಉಪ ಮುಖ್ಯಮಂತ್ರಿ ಬಿ. ಎಸ್.
ಯಡಿಯೂರಪ್ಪ ಮತ್ತಿತರ ಬಿಜೆಪಿ ಮುಖಂಡರು ಹಾಜರಿದ್ದರು.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|