|
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ಬೆಂಗಳೂರು: ನಕ್ಸಲರಿಗೆ ಕಂಡಲ್ಲಿ ಗುಂಡಿಕ್ಕಲು ನಕ್ಸಲ್
ನಿಗ್ರಹಪಡೆಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ
ನಿರ್ದೇಶಕ ಬಿ.ಎಸ್. ಸಿಯಾಲ್ ಹೇಳಿದ್ದಾರೆ.
ನಕ್ಸಲೀಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ
ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮೃದು ಧೋರಣೆ
ಅನುಸರಿಸುವ ಪ್ರಶ್ನೆಯೇ ಇಲ್ಲ. ರಾಜಿ ಸಂಧಾನ ಮೂಲಕ
ಶರಣಾಗಲು ನಕ್ಸಲೀಯರಿಗೆ ಒಂದು ಅವಕಾಶ ನೀಡಲಾಗುತ್ತದೆ.
ಅವರು ಇದಕ್ಕೆ ಬಗ್ಗದಿದ್ದರೆ ಕಂಡಲ್ಲಿ ಗುಂಡಿಕ್ಕಿ ಹತ್ಯೆ ಮಾಡುವಂತೆ
ನಕ್ಸಲ ನಿಗ್ರಹ ದಳಕ್ಕೆ ಆದೇಶ ನೀಡಲಾಗಿದೆ ಎಂದು ಸಿಯಾಲ್
ಹೇಳಿದರು.
ಆಡುಗೋಡಿಯ ಸಿಎಆರ್(ದಕ್ಷಿಣ) ಮೈದಾನದಲ್ಲಿ ಬೆಂಗಳೂರು ನಗರ
ಪೊಲೀಸರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ
ಈ ವಿಷಯ ಹಂಚಿಕೊಂಡರು.
ಇನ್ನಷ್ಟು
ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ
ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು
ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ
ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ
ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ
ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ
ಅಡೋಬ್ ಸಿಇಓ ಮಗ ಅನಂತ್ ಪಾರು
ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ
|