|
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಭದ್ರಾವತಿ: ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ
ಘಟಕದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ
ಸಮಾರಂಭವನ್ನು ನವೆಂಬರ್ ೨೧ ರಂದು ಹಮ್ಮಿಕೊಂಡಿದೆ.
ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣಮಂಟಪದಲ್ಲಿ ನಡೆಯುವ
ಸಮಾರಂಭವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ
ಟಿ.ಎ. ನಾರಾಯಣ ಗೌಡ ಉದ್ಘಾಟಿಸಲಿದ್ದಾರೆ.
ವೇದಿಕೆಯ ಸ್ಥಳೀಯ ಮುಖಂಡ ಸಂತೋಷ್ ಈ ವಿಷಯವನ್ನು
ಸುದ್ದಿಗಾರರಿಗೆ ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷ ಎ. ಪಿ. ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದಾರೆ.
ರಂಗಪ್ಪ ಸರ್ಕಲ್‌ನಿಂದ ಸಮಾರಂಭದ ಸ್ಥಳದವರೆಗೂ ದ್ವಿಚಕ್ರ
ವಾಹನ ರ್‍ಯಾಲಿ ನಡೆಸಲಾಗುವುದು. ಕುವೆಂಪು ವಿಶ್ವವಿದ್ಯಾಲಯದ
ಪ್ರಾಚಾರ್ಯ ಡಾ. ಜಿ. ಪ್ರಶಾಂತ ನಾಯಕ್ ಅವರಿಂದ
ಉಪನ್ಯಾಸವಿರುತ್ತದೆ. ಹಿರಿಯ ವಕೀಲ ಎಂ. ಮುರಿಗೆಪ್ಪ, ಕಲಾವಿದ ಎಸ್.
ಶಾಮಮೂರ್ತಿ ಹಾಗೂ ಸ್ತ್ರೀಶಕ್ತಿ ಸಂಘದ ಶ್ರೀಮತಿ ಎಸ್.ಪಿ. ಭಾರತಿ
ಸುರೇಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು
ವೇದಿಕೆಯ ಸಂತೋಷ್ ಹೇಳಿದ್ದಾರೆ.
ಇನ್ನಷ್ಟು
ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ
ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು
ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ
ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ
ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ
ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ
ಅಡೋಬ್ ಸಿಇಓ ಮಗ ಅನಂತ್ ಪಾರು
ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ
|