Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 18 November 2006 01:00 PM

ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ

 

ಬೆಂಗಳೂರು: ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಬೇಕಾಗಿದ್ದ ಈ ಚಿತ್ರೋತ್ಸವವನ್ನು ಅವರ ಅನುಪಸ್ಥಿತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರಗೌಡ ಉದ್ಘಾಟಿಸಿದರು.
 

`ಕನ್ನಡ ಹಾಗೂ ಜರ್ಮನಿಯ ನಡುವೆ ಅವಿನಾಭಾವ ಸಂಬಂಧವಿದೆ. ಎರಡರ ಮಧ್ಯೆ ಶ್ರೀಮಂತ ಸ್ನೇಹ ಸೇತುವೆಯಿದೆ. ಜರ್ಮನ್ನರಾದ ಕಿಟೆಲ್ ಮುಂತಾದವರು ಕನ್ನಡಕ್ಕೆ ಸಲ್ಲಿಸಿರುವ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಇಂದು ಕನ್ನಡ ಜಾಗತಿಕ ಮಟ್ಟಕ್ಕೆ ತಲುಪಬೇಕಾದರೆ ಅದಕ್ಕೆ ಇಂಥ ಜರ್ಮನ್ ಮಹನೀಯರ ಕೊಡುಗೆ ಕೂಡ ಇದೆ. ಕನ್ನಡ ಶಬ್ದಕೋಶ ಹಾಗೂ ಪತ್ರಿಕೋದ್ಯಮಕ್ಕೆ ಅವರ ಸೇವೆ ಅಪಾರ. ಹಾಗಾಗಿ ಈ ಚಿತ್ರೋತ್ಸವವನ್ನು ಇಂಡೋ-ಜರ್ಮನ್ ಚಿತ್ರೋತ್ಸವ ಎಂಬುದಕ್ಕಿಂತ ಕನ್ನಡ-ಜರ್ಮನ್ ಚಿತ್ರೋತ್ಸವ ಎಂದು ಕರೆಯುವುದು ಸೂಕ್ತ ಎಂದು ಮುಖ್ಯಮಂತ್ರಿ ಅವರ ಭಾಷಣವನ್ನು ಸಚಿವ ರಾಮಚಂದ್ರಗೌಡ ಓದಿದರು.
 

ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚೆನ್ನೈ ವಿಭಾಗದ ಕೌನ್ಸಿಲ್ ಜನರಲ್ ಹೇಂಜ್ ಕಾಪ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಭಾಗವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಹಾಜರಿದ್ದರು. ಭಾರತೀಯ ಪ್ರತಿನಿಧಿಗಳನ್ನು ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಹಾಗೂ ಚಿತ್ರೋತ್ಸವದ ಸಂಚಾಲಕ ವಿ.ಎನ್. ಸುಬ್ಬರಾವ್ ಪರಿಚಯಿಸಿಕೊಟ್ಟರು.
 

೭ ದಿನ ನಗರದ ಲಾವಣ್ಯ ಚಿತ್ರ ಮಂದಿರದಲ್ಲಿ ನ. ೨೩ವರೆಗೂ ನಡೆಯುವ ಈ ಚಿತ್ರೋತ್ಸವದಲ್ಲಿ ೨೦ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅವುಗಳಲ್ಲಿ ಪ್ರಮುಖವಾಗಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ಹಸೀನಾ', ಪಿ. ಶೇಷಾದ್ರಿಯವರ `ಬೇರು' ಹಾಗೂ `ತುತ್ತೂರಿ', ಎ.ಎಂ.ಆರ್. ರಮೇಶ್ ನಿರ್ದೇಶನದ `ಸೈನೇಡ್' ಕನ್ನಡದಿಂದ ಪ್ರದರ್ಶಿತವಾಗಲಿರುವ ಚಿತ್ರಗಳಲ್ಲಿ ಸೇರಿವೆ. ಭಾರತದ ಇತರ ಭಾಷೆಗಳ ಹಾಗೂ ಜರ್ಮನ್ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

 

ಪೂರಕ ಮಾಹಿತಿಗೆ

ನಗರದಲ್ಲಿ ಇಂಡೋ ಜರ್ಮನ್ ಚಲನಚಿತ್ರೋತ್ಸವ

 

ಇನ್ನಷ್ಟು

ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ

ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು

ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ

ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ

ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ

ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ

ಅಡೋಬ್ ಸಿಇಓ ಮಗ ಅನಂತ್ ಪಾರು

ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com