|
ಸಾಕ್ಷಿ ನೀಡಿ ನಂತರ ಆರೋಪಿಸಿ:ಡಿಕೇಶಿ
ಬೆಂಗಳೂರು: `ಆರೋಪ ಹೊರೆಸುವುದು ಮುಖ್ಯವಲ್ಲ
ಅದಕ್ಕೆ ಸರಿಯಾದ ಸಾಕ್ಷಿ ಪುರಾವೆಗಳನ್ನು ಒದಗಿಸಲು ಇವರಿಗೆ
ಸಾಧ್ಯವೇ' ಎಂದು ಮಾಜಿ ಸಚಿವ ಡಿ.ಕೆ. ಶಿವ ಕುಮಾರ್
ಸವಾಲೆಸಿದಿದ್ದಾರೆ.
ಮುಖ್ಯಮಂತ್ರಿ ಕುಮಾರ ಸ್ವಾಮಿ ಆರೋಪಿಸಿರುವಂತೆ ವಾಣಿಜ್ಯ ಅಥವಾ
ಅದಾಯ ತೆರಿಗೆ ಇಲಾಖೆಗೆ ತಾವು ನಯಾಪೈಸೆ ವಂಚಿಸಿಲ್ಲ. ತಮ್ಮ
ವಿರುದ್ಧ ಮುಖ್ಯ ಮಂತ್ರಿ ಅವರು ಮಾಡಿರುವ ಅಪಾದನೆ ಸತ್ಯಕ್ಕೆ
ದೂರ ಎಂದು ಸ್ಪಷ್ಟಪಡಿಸಿರುವ ಅವರು, ತಾವು ತೆರಿಗೆ ವಂಚಿಸಿರುವು
ದಾಗಿ ವಾಣಿಜ್ಯ ಮತ್ತು ಆದಾಯ ತೆರಿಗೆ ಇಲಾಖೆ ಹೇಳಿದೆಯೇ? ಹಾಗೆಂದು
ಸರ್ಟಿಫಿಕೇಟ್ ಕೊಟ್ಟಿದೆಯೇ ಅಥವಾ ಅದಕ್ಕೆ ಸಂಬಂಧಿಸಿದ ಪುರಾವೆ
ಇದೆಯೇ? ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
`ಕುಮಾರಸ್ವಾಮಿ ಕೊಲೆ ಮಾಡಿದ್ದಾರೆ ಎಂದು ತಾವು ಆರೋಪಿಸಿದರೆ
ಅವರು ಕೊಲೆಗಾರರಾಗುವುದಿಲ್ಲ. ಅದಕ್ಕೆ ಸಾಕ್ಷಿ ಕೊಡಬೇಕಾಗುತ್ತದೆ.
ಕೇವಲ ದ್ವೇಷ ರಾಜಕಾರಣದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಆರೋಪ
ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾಡಿರುವ
ಆರೋಪಗಳಿಗೆ ದಾಖಲೆ ಒದಗಿಸಲಿ' ಎಂದು ಸವಾಲೆಸೆದಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಮರು ಚುನಾವಣೆಯನ್ನು
ಗಮನದಲ್ಲಿಟ್ಟುಕೊಂಡು ಅವರು ಹೀಗೆ ಮಾಡಿದ್ದು, ಕಾಂಗ್ರೆಸ್‌ನ್ನು
ಮಟ್ಟ ಹಾಕುವ ಕನಸು ಕಾಣುತ್ತಿದ್ದಾರೆ. ಕೇವಲ ಆರೋಪ
ಮಾಡುವುದರಿಂದ ಏನೂ ಸಾಧಿಸಲಾಗದು. ಅದರ ಬದಲು
ಮುಖ್ಯಮಂತ್ರಿಯವರು ತಮ್ಮ ವಿರುದ್ಧ ತನಿಖೆಗೆ ಆದೇಶ ಕೊಡಲಿ
ಎದುರಿಸಲು ಸಿದ್ಧ ಎಂದು ಗುಡುಗಿದ್ದಾರೆ.
ಇನ್ನಷ್ಟು
ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ
ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು
ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ
ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ
ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ
ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ
ಅಡೋಬ್ ಸಿಇಓ ಮಗ ಅನಂತ್ ಪಾರು
ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ
|