|
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಬೆಂಗಳೂರು: ಸಿಎಟಿ( ಕಾಮನ್ ಅಪ್ಟಿಟೂಡ್ ಟೆಸ್ಟ್) ಪರೀಕ್ಷೆಯು
ದೇಶದ ೨೩ ನಗರಗಳಲ್ಲಿ ಕೇಂದ್ರದಲ್ಲಿ ಭಾನುವಾರ (ನ.೧೯)ದಂದು
ನಡೆಯಲಿದೆ. ಸಿಎಟಿ ಪರೀಕ್ಷೆಗೆ ೧.೯೧ ಲಕ್ಷ ವಿದ್ಯಾರ್ಥಿಗಳು ಹಾಜರಾಗುವ
ಸಾಧ್ಯತೆ ಇದೆ.
ಬೆಂಗಳೂರು ಸೇರಿದಂತೆ ಹೈದರಾಬಾದ್, ಪುಣೆಯಲ್ಲಿ ನಗರದ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ೪೪
ಪರೀಕ್ಷಾ ಕೇಂದ್ರ ತೆರೆದಿದ್ದು, ೪೩ ಸಾವಿರ ವಿದ್ಯಾರ್ಥಿಗಳು ಪರೀಕ್ಷೆ
ಬರೆಯಲಿದ್ದಾರೆ.
ಬೆಳಗ್ಗೆ ೧೦.೩೦ ರಿಂದ ೧ ಗಂಟೆವರೆಗೆ ಪರೀಕ್ಷೆ ನಡೆಯಲಿದೆ. ೯.೩೦
ರಿಂದ ೧೦ ಗಂಟೆ ಒಳಗೆ ಪರೀಕ್ಷಾ ಕೊಠಡಿಗೆ ಹಾಜರಾಗಬೇಕು.
ಇಲ್ಲದಿದ್ದರೆ ಪ್ರವೇಶ ನೀಡುವುದಿಲ್ಲ. ೧೦.೩೦ಕ್ಕೆ ಪ್ರಶ್ನೆ ಪತ್ರಿಕೆ
ವಿತರಿಸಲಾಗುತ್ತದೆ. ೧೦ರಿಂದ ೧೦.೩೦ರ ಅವಧಿಯಲ್ಲಿ ಪ್ರವೇಶ ಪತ್ರ
ಹಾಗೂ ಇತರ ದಾಖಲೆ ಪರಿಶೀಲನೆ ಮಾಡಲಾಗುತ್ತದೆ.
ಮೊದಲ ಬಾರಿಗೆ ಈ ಪರೀಕ್ಷೆ ಬರೆಯಲು ಅರ್ಧ ಗಂಟೆ ಹೆಚ್ಚುವರಿ
ಕಾಲಾವಕಾಶ ನೀಡಲಾಗುತ್ತಿದೆ. ಶೇ. ೫೦ರಷ್ಟು ಅಂಕಗಳಿಸಿದವರು
ತೇರ್ಗಡೆ ಹೊಂದುತ್ತಾರೆ ಎಂದು ಐಐಎಂನ ಪ್ರಕಟಣೆಯಲ್ಲಿ
ಹೇಳಲಾಗಿದೆ.
ಇನ್ನಷ್ಟು
ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ
ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು
ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ
ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ
ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ
ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ
ಅಡೋಬ್ ಸಿಇಓ ಮಗ ಅನಂತ್ ಪಾರು
ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ
|