|
ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು
ಮುಂಬಯಿ: ಹಾಲಿವುಡ್ ತಾರೆ ಅಂಜಲಿನಾ ಜೋಲಿ ಅವರ ೩ ಜನ
ರಕ್ಷಕರಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದೆ.

ಮುಂಬಯಿಯ ಶಾಲೆಯಲ್ಲಿ ಅಂಜಲಿನಾ ಜೋಲಿ ಅವರ ಚಿತ್ರೀಕರಣದಲ್ಲಿ
ತೊಡಗಿದ್ದರು. ಶಾಲೆಯ ಹೊರಗಿದ್ದ ಪೋಷಕರು ಮಕ್ಕಳನ್ನು
ಕರೆದುಕೊಂದು ಹೋಗಲು ಒಳಬರಲು ಯತ್ನಿಸಿದಾಗ ಶೂಟಿಂಗ್‌ಗೆ
ತೊಂದರೆಯಾಗುತ್ತದೆ ಎಂದು ಹೇಳಿ ಜೋಲಿ ಅವರ
ರಕ್ಷಕರು(ಬಾಡಿಗಾರ್ಡ್) ಪೋಷಕರನ್ನು ತಡೆದು, ಅವಾಚ್ಯ
ಶಬ್ದಗಳಿಂದ ನಿಂದಿಸಿದರು ಎಂದು ಜೋಲಿ ಅವರ ರಕ್ಷಕರ ಮೇಲೆ
ಆರೋಪ ಹೊರಸಲಾಗಿತ್ತು.
೩ ಜನ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ
ಹಾಜರುಪಡಿಸಲಾಯಿತು. ೨೫,೦೦೦ ರೂ. ದುಡ್ಡು ತೆತ್ತು ಈ ಮೂರು
ಜನರನ್ನು ಜೋಲಿ ಬಿಡಿಸಬೇಕಾಯಿತು. ಇದಲ್ಲದೆ ಆಜಾದ್ ನಗರ ಪೊಲೀಸ್
ಠಾಣೆಗೆ ನವೆಂಬರ್ ೨೩ರವರೆಗೂ ಪ್ರತಿದಿನ ಹಾಜರಾಗಬೇಕಾಗಿದೆ.
ಥಾಮಸ್ ಎಡ್ವರ್ಡ್ ಮಕ್ಡಾಮ್, ರಾಬರ್ಟ್ ಪ್ಯಾಟ್ರಿಕ್‌ಡೊನ್ನೆ ಮತ್ತು
ಜಾನ್ ಬ್ರೆಟ್ಟಿ ಎಂಬ ಮೂರರ ಮೇಲೆ ಐಪಿಸಿ ಸೆಕ್ಷನ್ ೩೨೩, ೨೯೮, ೫೦೪
ಮತ್ತು ೫೦೬ರ ಅನ್ವಯ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅವಾಚ್ಯ
ಶಬ್ದ ಬಳಕೆ, ಧಾರ್ಮಿಕ ನಿಂದನೆ, ಶಾಂತಿಗೆ ಭಂಗ, ಜನರನ್ನು ನೂಕಿದ
ಆರೋಪವನ್ನು ಈ ಮೂವರ ಮೇಲೆ ಹೊರೆಸಲಾಗಿದೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|