Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 17 November 2006 05:31 PM

ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ

 

ಹಾಸನ: ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ರಾಜ್ಯದ ೪ ಜಿಲ್ಲೆಗಳಲ್ಲಿ `ಸೈನ್ಸ್ ಪಾರ್ಕ್' ಪ್ರಾರಂಭಿಸಲಾಗುವುದು ಎಂದು ವಿಜ್ಞಾನ ಖಾತೆ ಸಚಿವ ರಾಮಚಂದ್ರಗೌಡ ಹೇಳಿದ್ದಾರೆ.
 

`ಮೂಲ ವಿಜ್ಞಾನ(ಬೇಸಿಕ್ ಸೈನ್ಸ್) ಬಳಕೆ ಕಮ್ಮಿಯಾಗುತ್ತಿದೆ. ತಾಂತ್ರಿಕ ವಿಜ್ಞಾನದತ್ತ ವಿದ್ಯಾರ್ಥಿಗಳು ಹೆಚ್ಚು ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗ, ರಾಯಚೂರು, ತುಮಕೂರು ಮತ್ತು ಮಂಗಳೂರುಗಳಲ್ಲಿ ವಿಜ್ಞಾನ ಪಾರ್ಕ್ ಸ್ಥಾಪಿಸಲಾಗುವುದು' ಎಂದು ರಾಮಚಂದ್ರಗೌಡ ಹೇಳಿದ್ದಾರೆ.
 

`ಈ ಯೋಜನೆಯ ಎರಡನೇ ಹಂತವಾಗಿ ಹಾಸನ ನಗರದಲ್ಲೂ ವಿಜ್ಞಾನ ಪಾರ್ಕ್ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಜಿಲ್ಲಾಡಳಿತಕ್ಕೆ ಸ್ಥಳ ಒದಗಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಪಾರ್ಕ್ ಅನ್ನು ೧ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು' ಎಂದು ಸಚಿವರು ಭರವಸೆ ನೀಡಿದರು.
 

`ಈಗಾಗಲೇ ಧಾರವಾಡದಲ್ಲಿರುವ ವಿಜ್ಞಾನ ಪಾರ್ಕ್ ಅನ್ನು ಅಭಿವೃದ್ಧಿ ಮಾಡಲಾಗುವುದು. ಅಗತ್ಯ ಬಿದ್ದರೆ ಸ್ಥಳ ವಿಸ್ತರಣೆ ಮಾಡಲಾಗುವುದು' ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

 

ಇನ್ನಷ್ಟು

ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ

ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ

ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ

ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ

ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ

ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ

ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ

ಸಚಿನ್-ಕಾಂಬ್ಳಿ ದಾಖಲೆ ಧ್ವಂಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com