|
ಅಂತರ್ಜಾಲದಲ್ಲೊಂದು ಇಂಗ್ಲಿಷ್-ಕನ್ನಡ ನಿಘಂಟು
ಸುವರ್ಣ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬರಹ.ಕಾಂ ನಿಂದ
ಕನ್ನಡಿಗರಿಗೆ ಪುಟ್ಟದೊಂದು ಉಡುಗೊರೆ
ಕನ್ನಡದಲ್ಲಿ ಬರೆಯುವಾಗ ಒಂದು ಇಂಗ್ಲಿಷ್ ಪದಕ್ಕೆ ಸೂಕ್ತವಾದ
ಸಮಾನಾರ್ಥಕ P ನ್ನಡ ಪದವೇನು ಎಂಬ ಸಮಸ್ಯೆ ಸಾಮಾನ್ಯವಾಗಿ
ಅಂತರ್ಜಾಲ ಕನ್ನಡಿಗರನ್ನು ಕಾಡುತ್ತಿರುತ್ತದೆ. ಮುದ್ರಿತ
ಇಂಗ್ಲಿಷ್-ಕನ್ನಡ ನಿಘಂಟೊಂದನ್ನು ಕೈಗೆತ್ತಿಕೊಂಡು ಸೂಕ್ತಪದ
ಅರಸುವ ಪರಿಶ್ರಮವನ್ನು ಅಂತರ್ಜಾಲಿಗರಿಂದ ನಿರೀಕ್ಷಿಸುವುದು
ತುಂಬಾ ಜಾಸ್ತಿ ಎನ್ನಬಹುದೇನೋ!. ಆದ್ದರಿಂದ ಅಂತರ್ಜಾಲ
ಮಾಧ್ಯಮದ ಮೂಲಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ,
ಅಂಚೆ ಕಳಿಸುವ, ಬ್ಲಾಗ್ ಮಾಡುವವರ ಅನುಕೂಲಕ್ಕಾಗಿ
ಇಂಗ್ಲಿಷ್-ಕನ್ನಡ ನಿಘಂಟೊಂದನ್ನು ಬರಹ ನಿರ್ಮಾತೃ ಶೇಷಾದ್ರಿವಾಸು
ಚಂದ್ರಶೇಖರನ್ ಪರಿಚಯಿಸಿದ್ದಾರೆ.
ಸುವರ್ಣ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ
ಬರಹ.ಕಾಂನಿಂದ
ಕನ್ನಡಿಗರಿಗೆ ಪುಟ್ಟದೊಂದು ಉಡುಗೊರೆಯಾಗಿ ಪ್ರೊ. ಜಿ.
ವೆಂಕಟಸುಬ್ಬಯ್ಯನವರ ಪ್ರಿಸಮ್
ಇಂಗ್ಲಿಷ್-ಕನ್ನಡ ನಿಘಂಟು ಈಗ
ಅಂತರ್ಜಾಲದಲ್ಲಿ ಲಭ್ಯವಿದೆ. ಸಂಪೂರ್ಣ ಯೂನಿಕೋಡ್
ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿರುವ ಈ ನಿಘಂಟಿನಲ್ಲಿ ಕನ್ನಡ
ಅಥವಾ ಇಂಗ್ಲಿಷ್ ಪದಗಳನ್ನು ಕೊಟ್ಟು ಸಮಾನಾರ್ಥ ಪದಗಳನ್ನು
ಹುಡುಕಬಹುದಾಗಿದೆ.
ಇಂಗ್ಲಿಷ್-ಕನ್ನಡ ನಿಘಂಟು ಬಳಸಲು
http://www.baraha.com/nighantu/ ನೋಡಿ.
ಇನ್ನಷ್ಟು
ಯೂನಿಕೋಡ್‌ನಲ್ಲಿ
ವಿಕ್ರಾಂತಕರ್ನಾಟಕ.ಕಾಂ
ಬರಹ ವಾಸು ಮತ್ತೊಂದು ಸಾಧನೆ
`ಬರಹ'
ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
|