|
ಡಿಕೆಶಿ ಬೆಂಬಲಿಗರಿಂದ ಭಾರಿ ಪ್ರತಿಭಟನೆ
ರಾಜಕೀಯ ದ್ವೇಷದ ಆಟ;ಸಾರ್ವಜನಿಕರಿಗೆ ಹಾನಿ
ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ
ಅವರ ಕುಟುಂಬದ ಮೇಲೆ ನ್ಯಾಯಾಲಯವು ಬಂಧನ ವಾರಂಟ್
ಹೊರಡಿಸಿರುವುದನ್ನು ಖಂಡಿಸಿ ಡಿಕೆಶಿ ಅವರ ಬೆಂಬಲಿಗರು ರಾಜ್ಯದ
ಹಲವೆಡೆ ಪ್ರತಿಭಟನೆ ಮಾಡಿದ್ದಾರೆ.
ಕನಕಪುರದಲ್ಲಿ ಡಿಕೆಶಿ ಅವರ ಬೆಂಬಲಿಗರು ಕುರುಪೇಟೆ,
ಅಂಬೇಡ್ಕರ್‌ನಗರ, ಬೂದಿಕೆರೆ ರಸ್ತೆ ಮತ್ತಿತರ ಕಡೆ ಕಲ್ಲು ತೂರಾಟ
ನಡೆಸಿ, ೩ಕೆ ಎಸ್‌ಆರ್‌ಟಿಸಿ ಬಸ್‌ಗಳನ್ನು ಜಖಂ ಗೊಳಿಸಿದರು. ಹಾರೋಹಳ್ಳಿ
ಬಸ್ ಘಟಕಕ್ಕೆ ಬೆಂಕಿ ಹಚ್ಚಿದ್ದರಿಂದ ಸುಮಾರು ೧೩ ಬಸ್ ಗಳು
ಹಾನಿಯಾಗಿದೆ. ಲಕ್ಷಾಂತರ ರೂ. ನಷ್ಟ ಆಗಿದೆ ಎಂದು ಪೊಲೀಸರು
ಹೇಳಿದ್ದಾರೆ.
`ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು ೨೫ ಜನರನ್ನು ವಶಕ್ಕೆ
ತೆಗೆದುಕೊಂಡಿದ್ದೇವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕೆಎಸ್‌ಆರ್‌ಪಿ
ತುಕಡಿಗಳನ್ನು ನಿಯೋಜಿಸಲಾಗಿದೆ' ಎಂದು ಡಿವೈಎಸ್‌ಪಿ ಹಾಲೇಶ್
ನಾಯಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು
ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣ' ಎದುರು ಪ್ರತಿಭಟನೆ
ನಡೆಸಿದರು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶಾಸಕ ದಿನೇಶ್
ಗುಂಡೂರಾವ್ ನೇತೃತ್ವದ ನಡೆದ ಪ್ರತಿಭಟನೆಯಲ್ಲಿ ಶಾಸಕ ನೆ.ಲ.
ನರೇಂದ್ರಬಾಬು, ಆರ್.ವಿ. ವೆಂಕಟೇಶ್, ಕೆ. ಚಂದ್ರಶೇಖರ್, ಜಿಲ್ಲಾ
ಮಹಿಳಾ ಘಟಕ ಅಧ್ಯಕ್ಷೆ ಪದ್ಮಾವತಿ ಮುಂತಾದ ಮುಖಂಡರು
ಭಾಗವಹಿಸಿದ್ದರು.
ಬೀದರ್, ಬಿಜಾಪುರ, ಚಾಮರಾಜನಗರ, ಬಳ್ಳಾರಿ, ಗುಲ್ಬರ್ಗ,
ಚಿತ್ರದುರ್ಗ, ಮಂಡ್ಯದಲ್ಲೂ ಪ್ರತಿಭಟನೆಗಳು ನಡೆದ ಬಗ್ಗೆ
ವರದಿಯಾಗಿದೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|