|
ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ
ಸಿಡ್ನಿ: ಮುಂದಿನ ಪೀಳಿಗೆ ಮೊಬೈಲ್ ಜನಕರೆಂದೇ ಖ್ಯಾತಿ
ಗಳಿಸಿರುವ ಟೆಲ್ಕೋ -೩ ಮೊಬೈಲ್ ಸಂಸ್ಥೆಯು ಅಂತರ್ಜಾಲ
ತಂತ್ರಜ್ಞಾನದಲ್ಲಿ ಹೆಸರು ಮಾಡಿರುವ ಸ್ಕೈಪ್ ಹಾಗೂ ಗೂಗಲ್
ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ
ಮೊಬೈಲ್‌ನಲ್ಲಿ ಅಂತರ್ಜಾಲ ತಾಣಗಳನ್ನು ತ್ವರಿತವಾಗಿವೀಕ್ಷಿಸಲು
ಸಹಾಯಕವಾಗಲಿದೆ. ವಿದೇಶಕ್ಕೆ ಉಚಿತಕರೆ, ಗಣಕಬಳಕೆ, ತ್ವರಿತ
ಗತಿಯ ಅಂತರ್ಜಾಲ ಸೇವೆ , ಟೆಲಿವಿಷನ್ ಸಂಪರ್ಕ ಮುಂತಾದ
ಸೌಲಭ್ಯಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಎಲ್ಲಾ
ಸೌಲಭ್ಯಗಳನ್ನು ಹೊಂದಬೇಕಾದರೆ ಮುಂದಿನ ತಿಂಗಳವರೆಗೂ
ಕಾಯಬೇಕಾಗುತ್ತದೆ.
ತಿಂಗಳಿಗೆ ಸುಮಾರು ೩೦ ಡಾಲರ್‌ನ ಬೆಲೆ ತೆತ್ತರೆ ಸಾಕು ಬ್ರಾಡ್ ಬಾಂಡ್
ಇಂಟರ್ನೆಟ್ ಸೌಲಭ್ಯ ದೊರಕಲಿದೆ. ಇದರ ಜೊತೆಗೆ ಮಾಸಿಕ
ವೆಚ್ಚವನ್ನು ಗ್ರಾಹಕರು ಭರಿಸಬೇಕು ಎಂದು ೩ ಕಂಪೆನಿಯ
ವಕ್ತಾರರು ಹೇಳಿದ್ದಾರೆ.
ಸ್ಕೈಪ್, ಸ್ಲಿಂಗ್ ಮೀಡಿಯಾ, ಯಾಹೂ, ನೋಕಿಯಾ, ಗೂಗಲ್,
ಇಬೇ, ಮೈಕ್ರೋಸಾಫ್ಟ್ ಮತ್ತು ಸೋನಿ ಎರಿಕ್‌ಸನ್ ಸಂಸ್ಥೆಗಳೊಂದಿಗೆ
ಎಕ್ಸ್ ಸೀರಿಸ್ ನ ೩ಜಿ ಮೊಬೈಲ್ ಸಹಯೋಗ ಹೊಂದಿದೆ. ಇದರ ಮೂಲಕ
ವಿದೇಶಿ ಕರೆಗಳನ್ನು ಉಚಿತವಾಗಿ ಮಾಡಬಹುದು, ಟಿವಿ ನೋಡಬಹುದು,
ಯಾಹೂ ಸೌಲಭ್ಯಗಳು, ಗೂಗಲ್‌ನ ಎಲ್ಲಾ ಸೌಲಭ್ಯಗಳನ್ನು
ಪಡೆಯಬಹುದಾಗಿದೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|