|
ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ
ಟೋಕಿಯೋ: ಸಾಗರದ ತಳಬದಿಯಲ್ಲಿ ಉಂಟಾದ
ಭೂಕಂಪನದಿಂದ ಸಣ್ಣ ಪ್ರಮಾಣದ ಸುನಾಮಿ ಅಲೆಗಳನ್ನು ಜಪಾನ್,
ರಷ್ಯ ಮತ್ತು ಅಲಾಸ್ಕ ಭಾಗದ ಜನತೆ ಎದುರಿಸಿದ್ದಾರೆ.
ಜಪಾನ್ ದೇಶದ ಈಶಾನ್ಯದ ಮೂಲೆಯಲ್ಲಿರುವ ಕುರಿಲ್ ದ್ವೀಪದಲ್ಲೂ
ಮುನ್ನೆಚ್ಚರಿಕೆಯನ್ನು ಮೊದಲು ನೀಡಲಾಯಿತು. ದ್ವೀಪದ ಜನರು
ಮುನ್ನೆಚ್ಚರಿಕೆಯಿಂದ ಪಾರಾಗಿದ್ದಾರೆ. ಸುಮಾರು ೧೬ ಇಂಚಿಗೂ ಅಧಿಕ
ಎತ್ತರವಿದ್ದ ಅಲೆಗಳು ಸ್ವಲ್ಪ ಕಾಲದ ನಂತರ ತನ್ನ ಆರ್ಭಟವನ್ನು
ನಿಲ್ಲಿಸಿತು ಎಂದು ಹೋಕೈಡೊ ದ್ವೀಪದ ಜನ ಹೇಳಿದ್ದಾರೆ.
ಜಪಾನ್‌ನ ಉತ್ತರ ಭಾಗದ ಫೆಸಿಪಿಕ್ ಸಾಗರದಲ್ಲಿ ಬುಧವಾರ ಉಂಟಾದ
ಕಂಪನವು ರಿಕ್ಟರ್ ಮಾಪಕದಲ್ಲಿ ೮.೧ ರಷ್ಟಿತ್ತು.
`ಬುಧವಾರ ಸಂಭವಿಸಿದ ಭೂಕಂಪನ ಸಣ್ಣ ಪ್ರಮಾಣದ್ದಾದರೂ
ಮುಂದೆ ತೀವ್ರ ಮಟ್ಟದ ಸುನಾಮಿ ಅಲೆಗಳು ಸಾಗರದಿಂದ
ಮೇಲೇಳಲಿವೆ. ಆದರೆ ಜಪಾನ್‌ಗೆ ಹೆಚ್ಚಿನ ತೊಂದರೆ ಸಂಭವಿಸುವ
ಸಾಧ್ಯತೆ ಇಲ್ಲ' ಎಂದು ಸುನಾಮಿ ಮಾಪನ ಕೇಂದ್ರದ ಮುಖ್ಯಸ್ಥ
ಟಕೇಶಿ ಹಚಿಮೈನ್ ಹೇಳಿದ್ದಾರೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|