|
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಐಜ್ವಾಲ್: ಭತ್ತ ಬೆಳೆ ನಾಶ ಮಾಡುತ್ತಿದ್ದ ಇಲಿಗಳನ್ನು
ಕೊಲ್ಲುವ ಕಾರ್ಯ ಕೈಗೊಂಡಿರುವ ಮಿಜೋರಾಂನ ಈಶಾನ್ಯ ಭಾಗದ
ಚಂಪೈ ಜಿಲ್ಲೆಯ ಜನ ಇದುವರೆಗೂ ೧೦,೦೦೦ ಇಲಿಗಳ ಮಾರಣ
ಹೋಮ ಮಾಡಿದ್ದಾರೆ.ಪೈಲೊ ಎಂಬ ಗ್ರಾಮವೊಂದರಲ್ಲೇ ಸುಮಾರು
೬,೦೦೦ ಇಲಿಗಳನ್ನು ಕೊಲ್ಲಲಾಗಿದೆ.
`ನಾನು ಈ ಬಾರಿ ೪ ಕ್ವಿಂಟಾಲ್ ಫಸಲು ಬರುವುದೆಂದು ನಿರೀಕ್ಷಿಸಿದ್ದೆ.
ಇಲಿಗಳ ಕಾಟದಿಂದ ಎಲ್ಲಾ ನಾಶವಾಗಿದೆ' ಎಂದು ಪೈಲೋ ಗ್ರಾಮದ ಚಾರ್ಲಿನಾ
ಹೇಳುತ್ತಾರೆ.
ಪೈಲೋ ಗ್ರಾಮ ಸೇರಿದಂತೆ ಚಾರ್ತು ಮತ್ತು ದುಲ್ತೆ ಗ್ರಾಮವೂ
ಕೂಡ ಇಲಿಗಳ ಕಾಟಕ್ಕೆ ತುತ್ತಾಗಿದೆ.
`ಬಿದಿರು ಮೆಳೆಯಲ್ಲಿ ಕಾಣಿಸಿಕೊಂಡಿರುವ ಹೂವು
(ಮೌತಂ-ಬಿದಿರುಗಳಲ್ಲಿ ಹೂವು ಬಿಡುವಿಕೆ) ವಿನಾಶಕಾರಿಯಾಗಿ
ಪರಿಣಮಿಸುತ್ತಿದೆ' ಎಂದು ಚಾರ್ತು ಗ್ರಾಮದ ಮಿಂಗ್ ತಾಂಗ ಹೇಳಿದ್ದಾರೆ.
ಒಂದೇ ರಾತ್ರಿಯಲ್ಲಿ ಸುಮಾರು ೧೫೦ ಇಲಿಗಳನ್ನು ಸಾಂಪ್ರದಾಯಿಕ
ಶೈಲಿಯನ್ನು ಬಳಸಿ ಕೊಂದಿದ್ದಾಗಿ ಮಿಂಗ್ ತಾಂಗ ಹೇಳುತ್ತಾರೆ.
೫೦ ವರ್ಷಗಳ ಹಿಂದೆ ಇದೇ ರೀತಿಯ ತೊಂದರೆಗೆ ಒಳಗಾಗಿದ್ದ
ಮಿಜೋರಾಂ ರಾಜ್ಯ ಬರ ಪರಿಸ್ಥಿತಿಯನ್ನು ಎದುರಿಸಿತ್ತು.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|