Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 16 November 2006 04:08 PM

ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ

 

ಬೆಂಗಳೂರು: ಭಾರತ ಸಂಸ್ಕೃತಿ ಪ್ರತಿಷ್ಠಾನ ಕನಕದಾಸರ ಜಯಂತಿಯ ೬ನೇವರ್ಷದ ಉತ್ಸವವಾದ ಕಾರ್ತೀಕ ಕೃಷ್ಣ ತದಿಗೆಯನ್ನು ಇತ್ತೀಚೆಗೆ ಆಚರಿಸಿತು.

 

ರಾಜ್ಯದ ಮೂರನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಟಿ. ವೆಂಕಟಸ್ವಾಮಿ ಸಂಗೀತೋತ್ಸವ ಉದ್ಘಾಟಿಸಿದರು. ಕಾಗಿನೆಲೆ ಕನಕಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಳ ಚರಿತ್ರೆ ಹಾಗೂ ಹರಿಭಕ್ತಿಸಾರ ಕಾವ್ಯಗಳ ಗಮನ ವಾಚನ ನಡೆಯಿತು. ಕನಕದಾಸರ ಕೃತಿಗಳಿಂದ ಆಯ್ದ ದಾಸಪದಗಳನ್ನು ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಸಂಗೀತಗಾರರು, ಭಕ್ತಾದಿಗಳು ಹಾಡಿ ನಲಿದರು.
 

ಕಾರ್ಯಕ್ರಮದಲ್ಲಿ ಗಾನಸುಧೆಯನ್ನು ಹರಿಸಿದ ಗಾಯಕ, ಗಾಯಕಿಯರು: ವಿದುಷಿ ಶ್ವೇತಾ ಕೇಶವ ಪ್ರಾರ್ಥನೆ ಹಾಡಿದರು. ವಿದುಷಿ ಡಾ. ಟಿ.ಎಸ್. ಸತ್ಯವತಿ, ಗಮಕಿ ಜಯಲಕ್ಷ್ಮಿ ಇನಾಂದಾರ್, ವಿದ್ವಾನ್ ಕಮಲಕುಮಾರ್, ರಾಘವೇಂದ್ರರಾವ್, ಅನಂತ ಭಾಗವತ್, ಚೆನ್ನೈನ ವಿದುಷಿ ಡಾ. ಪ್ರಿಯಾಶ್ರೀ, ಪದ್ಮಜಾ ಶೇಷಗಿರಿರಾವ್, ವಿದುಷಿ ಶ್ವೇತಾ ಕೇಶವ ಮುಂತಾದವರು ನಾದ ನಮನ ಸಲ್ಲಿಸಿದರು. ಇವರಿಗೆ ಪಕ್ಕ ವಾದ್ಯದಲ್ಲಿ ಪಿಟೀಲು ವಿದ್ವಾಂಸ ಟಿ.ಎಸ್. ಕೃಷ್ಣಮೂರ್ತಿ ಸಾಥ್ ನೀಡಿದರು.
 

ಭಾರತ ಸಂಸ್ಕೃತಿ ಪ್ರತಿಷ್ಠಾನದ ಮುಂದಿನ ಯೋಜನೆ:

`ಕನಕ ಚಿತ್ರೋತ್ಸವ'ದ ಹೆಸರಿನಲ್ಲಿ ಕನಕದಾಸರ ಚಿಂತನೆಯನ್ನು ಆಧರಿಸಿ ೫೦೦ಕ್ಕೂ ಹೆಚ್ಚು ಕಲಾಕೃತಿಗಳನ್ನು ರಾಜ್ಯದ ೧೧ ಲಲಿತಕಲಾ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ರಚಿಸಲಿದ್ದಾರೆ. ಅವುಗಳಲ್ಲಿ ಅತ್ಯುತ್ತಮ ೬ ಕೃತಿಗಳಿಗೆ ಬಹುಮಾನ ನೀಡಲಾಗುವುದು. ಪ್ರೌಢಶಾಲಾ ಶಿಕ್ಷಕರಿಗಾಗಿ `ಕನಕದಾಸರ ಸಾಮಾಜಿಕ ಚಿಂತನೆ' ಎನ್ನುವ ವಿಚಾರದಲ್ಲಿ ಪ್ರತಿಷ್ಠಾನವು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

 

ಇನ್ನಷ್ಟು

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com