Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 16 November 2006 12:12 PM

ಸೇಡಿನ ರಾಜಕೀಯ: ಎಲ್ಲಕ್ಕೂ ಗಣಿಗಾರಿಕೆ ಮೂಲ

 

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಹೊರೆಸಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಕುಟುಂಬದ ಸದಸ್ಯರ ವಿರುದ್ಧ ಸಂಡೂರು ಪ್ರಥಮ ದರ್ಜೆ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದೆ.D.K Shivakumar

 

ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ, ಸಹೋದರ ಡಿ.ಕೆ. ಸುರೇಶ್, ಸಹೋದರಿ ಮಂಜುಳಾ ಶರತ್ಚಂದ್ರ, ಕೆ. ವಿನೋದ್ ಕುಮಾರ್, ಕೆ. ಶ್ರೀನಿವಾಸ್ ಹಾಗೂ ಗಂಗಾಧರಮೂರ್ತಿ(ಇತರ ಸಂಬಂಧಿಗಳು) ಕಬ್ಬಿಣದ ಅದಿರು ಅಕ್ರಮ ದಾಸ್ತಾನು ಹೊಂದಿದ್ದರೆಂದು ಆರೋಪಿಸಿ ನ್ಯಾಯಾಲಯವು ವಾರಂಟ್ ಹೊರಡಿಸಿದೆ.
 

ಆದರೆ, ಶಿವಕುಮಾರ್ ಅವರು ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿ, ತಾವು ಮತ್ತು ತಮ್ಮ ಮನೆಯವರು ಜಾಮೀನು ಅರ್ಜಿ ಸಲ್ಲಿಸುವುದಿಲ್ಲ. ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ.
Kumaraswamy

ಇತ್ತೀಚೆಗೆ ಡಿಕೇಶಿ ಒಡೆತನದ ಪಿ.ಕೆ.ಪಿ ಕಬ್ಬಿಣ ಅದಿರು ಕಂಪೆನಿ ಮೇಲೆ ಧಾಳಿ ನಡೆಸಿತ್ತು. ಸುಮಾರು ೨೭.೬೬ ಕೋಟಿ ರೂ. ಮೌಲ್ಯದ ೨,೭೬,೬೦೦ ಮೆಟ್ರಿಕ್ ಟನ್ ಕಬ್ಬಿಣ ಅದಿರು ಮತ್ತು ಪುಡಿಯನ್ನು ಮುಟ್ಟುಗೋಲು ಹಾಕಿಕೊಂಡು, ಕಂಪೆನಿ ವಿರುದ್ಧ ಅರಣ್ಯ ಇಲಾಖೆ ಮೊಕದ್ದಮೆ ಹೂಡಿದೆ.
 

ಪಿ.ಕೆ.ಪಿ. ಕಬ್ಬಿಣ ಅದಿರು ಕಂಪೆನಿ ಯಾವುದೇ ಅಧಿಕೃತ ದಾಖಲೆಗಳನ್ನು ನೀಡಲಿಲ್ಲ. ದಾಖಲೆ ಪತ್ರಗಳಿಲ್ಲದೆ ಅದಿರು ಸಂಗ್ರಹಿಸಿಟ್ಟಿರುವುದು ಅಕ್ರಮ ಕೃತ್ಯ ಮತ್ತು ಕಾನೂನುಬಾಹಿರ ಚಟುವಟಿಕೆ ಎಂದು ಅರಣ್ಯ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
Dharmasingh

ಅದಿರು ದಾಸ್ತಾನು ಮಾಡಿದ ಸ್ಥಳದಲ್ಲಿದ್ದ ವ್ಯವಸ್ಥಾಪಕ ಎನ್.ಸುಬ್ಬಯ್ಯ, ಸೆಲ್ವಂ ಮತ್ತು ಶಂಕರ್ ಎಂಬುವರನ್ನು ಬಂಧಿಸಲಾಗಿದೆ. ಡಿಕೆಶಿ ಕುಟುಂಬದ ಒಟ್ಟು ೧೫ ಮಂದಿಗಾಗಿ ಶೋಧನೆ ಮುಂದುವರೆದಿದೆ ಎಂದು ಹಿರಿಯ ಅರಣ್ಯ ಅಧಿಕಾರಿ ಹೇಳಿದರು.
 

`ಚಾಮುಂಡೇಶ್ವರಿ ಚುನಾವಣೆಯಲ್ಲಿ ಸೋಲಬಹುದೆಂಬ ಹತಾಶೆಯಿಂದ ಇಂತಹ ತಂತ್ರಗಳ ಮೂಲಕ ಪಕ್ಷದ ಪ್ರಮುಖರ ಬಾಯಿ ಕಟ್ಟಲು ಹೊರಟಿದ್ದಾರೆ. ಹುಡುಕಿ ಹುಡುಕಿ ಕೇಸ್ ಹಾಕಲು ಪ್ರಾರಂಭಿಸಿದ್ದಾರೆ' ಎಂದು ಧರ್ಮಸಿಂಗ್ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Devegowda

`ಸೇಡಿನ ರಾಜಕಾರಣವನ್ನು ಯಾರೂ ಸಹಿಸುವುದಿಲ್ಲ. ಇದು ನಿಜಕ್ಕೂ ಹೇಯ ಕೃತ್ಯ. ರಾಜಕೀಯವಾಗಿ ಏನೇ ಇರಲಿ ಹೋರಾಡುತ್ತೇವೆ' ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಹೇಳಿಕೆ ನೀಡಿದ್ದಾರೆ.
 

`ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಕೇಂದ್ರ ಸರ್ಕಾರ ಕಳುಹಿಸಿದ ವರದಿ ಆಧಾರದ ಮೇಲೇಯೇ ಈಗ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ತನಿಖೆ ನಡೆಸಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಶಿವಕುಮಾರ್ ಕುಟುಂಬಕ್ಕೆ ವಾರೆಂಟ್ ಬಂದಿದ್ದರೆ ಅದಕ್ಕೆ ರಾಜಕೀಯ ದ್ವೇಷ ಕಾರಣ ಎನ್ನುವುದು ಸರಿಯಲ್ಲ' ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

 

ಇನ್ನಷ್ಟು

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com