Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 16 November 2006 03:15 PM

ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ

 

ಶಿವಮೊಗ್ಗ: ಅಡಕೆ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳು ಮತ್ತು ವರ್ತಕರ ನಿಯಂತ್ರಣವನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳ ಮಾರುಕಟ್ಟೆಗಿಳಿಯಲು ಸಜ್ಜಾಗಿದೆ. ಮೊದಲ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
 

ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯ ಪ್ರವರ್ತಕ ಶೀಗೆಹಳ್ಳಿಯ ಶಾಂತಾರಾಮ ವಿ. ಹೆಗಡೆ ಅಧ್ಯಕ್ಷತೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಈ ನಿರ್ಣಯ ಸರ್ವ ಸದಸ್ಯರ ಮೆಚ್ಚುಗೆಯನ್ನು ಗಳಿಸಿತು.
 

೨೦೦೬-೦೭ನೇ ಸಾಲಿನಲ್ಲಿ ರಾಜ್ಯಾದ್ಯಂತ ಕನಿಷ್ಠ ೬೦ ಸಾವಿರ ಕ್ವಿಂಟಾಲ್ ಅಡಕೆ ಖರೀದಿಸಲು ನಿರ್ಧರಿಸಿದೆ. ಇದಕ್ಕಾಗಿ ೭೫ ಕೋಟಿ ರೂ. ತೊಡಗಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯದ ಅಡಕೆ ಮಾರುಕಟ್ಟೆಯಲ್ಲಿ ಉತ್ತರ ಭಾರತದ ಗುಟ್ಕಾ ಕಂಪೆನಿಗಳು ಮತ್ತು ಮಂಡಿ ವರ್ತಕರು ಅಡಕೆ ಬೆಲೆಯನ್ನು ನಿಯಂತ್ರಿಸುತ್ತಿದ್ದಾರೆ. ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗಲೆಲ್ಲಾ ಬೆಳೆಗಾರರನ್ನು ವಂಚಿಸುವ ಕೆಲಸವನ್ನು ವರ್ತಕರು ಮಾಡುತ್ತಿದ್ದಾರೆ. ಈ ಕಾರಣದಿಂದ ಎಲ್ಲ ಮಾರುಕಟ್ಟೆಗಳಲ್ಲಿ ವರ್ತಕರಿಗೆ ಅವಕಾಶ ನೀಡದೆ ಹೆಚ್ಚು ಅಡಕೆ ಖರೀದಿಸಲು ತೀರ್ಮಾನಿಸಲಾಯಿತು ಎಂದು ಶಾಂತಾರಾಮ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು. ಸಭೆಯಲ್ಲಿ ಸದಸ್ಯರಾದ ಕೆ. ನರಸಿಂಹನಾಯಕ್, ಸೀತಾರಾಮ ಭಟ್, ಬಿ.ಆರ್. ಜಯಂತ್, ಕೆ.ಎಂ. ಸೂರ್ಯನಾರಾಯಣ ಮತ್ತಿತರರು ಹಾಜರಿದ್ದರು.
 

ಪ್ರಸ್ತುತ ಮಂಡಳದಲ್ಲಿ ಕೇವಲ ಒಂದೂವರೆ ಕೋಟಿ ರೂ. ಬಂಡವಾಳವಿದ್ದು, ಅಡಕೆ ಖರೀದಿಗೆ ಬೇಕಾಗುವ ಬಂಡವಾಳವನ್ನು ಬ್ಯಾಂಕ್‌ಗಳು ಮತ್ತು ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆಯಲು ನಿರ್ಧರಿಸಲಾಯಿತು.

 

ಇನ್ನಷ್ಟು

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com